ಹುಬ್ಬಳ್ಳಿ: ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಶನಿವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹವಾಲಾ ಡೀಲರ್ ಮನೆಯಿಂದ ₹5.7 ಕೋಟಿ ಮೌಲ್ಯದ ₹2000 ಮುಖಬೆಲೆಯ ಹೊಸ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಹವಾಲಾ ಡೀಲರ್ ಮನೆಯ ಶೌಚಾಲಯದೊಳಗಿನ ರಹಸ್ಯ ಕೋಣೆಯಲ್ಲಿ ಅಕ್ರಮ ಹಣ ಪತ್ತೆಯಾಗಿದೆ. ₹90 ಲಕ್ಷ ಮೌಲ್ಯದ ಹಳೇ ನೋಟು ಮತ್ತು 32 ಕೆಜಿ ಚಿನ್ನದ ಗಟ್ಟಿಯನ್ನೂ ಐಟಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಐಟಿ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ ಅಕ್ರಮ ಹಣ ಮತ್ತು ಚಿನ್ನ ಪತ್ತೆ ಹಚ್ಚಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ ₹11. 13 ಲಕ್ಷ ದಾಖಲೆ ರಹಿತ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಇದರಲ್ಲಿ ₹8.5 ಲಕ್ಷ ಮೌಲ್ಯದ ₹2000 ಮುಖಬೆಲೆಯ ಹೊಸ ನೋಟುಗಳಿದ್ದು, ₹1.5 ಲಕ್ಷ ₹100 ನೋಟು ಮತ್ತು ಇನ್ನುಳಿದ ₹50,000 ನಗದು ₹500 ನೋಟುಗಳಲ್ಲಿತ್ತು.
Comments are closed.