ಮುಂಬೈ: ಭಾರತ–ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್ 7 ವಿಕೆಟ್ ನಷ್ಟಕ್ಕೆ 451 ರನ್ ಕಲೆ ಹಾಕಿದೆ. ಮುರಳಿ ವಿಜಯ್ ಮತ್ತು ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಗುರುವಾರ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 400 ರನ್ ಗಳಿಸಿ ಆಲೌಟ್ ಆಗಿತ್ತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಕೊಹ್ಲಿ ಪಡೆಗೆ ಮುರಳಿ ವಿಜಯ್– ಪೂಜಾರ ಉತ್ತಮ ಜೊತೆಯಾಟ ಆಡಿದ್ದರು.
ಭಾರತದ ಪರ: ಕೆ.ಎಲ್. ರಾಹುಲ್ 24, ಮುರಳಿ ವಿಜಯ್ 136, ಪೂಜಾರ 47, ಕರಣ್ ನಾಯರ್ 13, ಪಾರ್ಥಿವ್ ಪಟೇಲ್ 15, ಆರ್ ಅಶ್ವಿನ್ 0, ಜಡೇಜ 25, ವಿರಾಟ್ ಕೊಹ್ಲಿ 147 (ಅಜೇಯ), ಜಯಂತ್ ಯಾದವ್ 30 (ಅಜೇಯ)ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಪರ: ಮೊಹಿನ್ ಅಲಿ- 2, ಆದಿಲ್ ರಶೀದ್- 2, ಜೊ ರೂಟ್ -2, ಜೇಕ್ ಬಾಲ್- 1 ವಿಕೆಟ್ ಪಡೆದು ಮಿಂಚಿದ್ದಾರೆ.
Comments are closed.