ನವದೆಹಲಿ (ಡಿ.10): ಏಮ್ಸ್ ನಲ್ಲಿ ನಡೆದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಿಡ್ನಿ ಕಸಿ ಶಸ್ತ್ರವಿಕಿತ್ಸೆ ಇಂದು ಮಧ್ಯಾಹ್ನ ಯಶಸ್ವಿಯಾಗಿದೆ.
ಏಮ್ಸ್ ನಿರ್ದೇಶಕ ಎಂ.ಸಿ ಮಿಶ್ರಾ ಸೇರಿದಂತೆ ಖ್ಯಾತ ವೈದ್ಯರಾದ ವಿ.ಕೆ ಬನ್ಸಾಲ್, ವಿ.ಸೀನು ನೇತೃತ್ವದ ತಂಡ ಐದು ತಾಸುಗಳ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.
ಬೆಳಿಗ್ಗೆ 9 ಗಂಟೆಗೆ ಶುರುವಾದ ಆಪರೇಶನ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಪೂರ್ಣವಾಗಿದೆ. ಆಪರೇಶನ್ ಬಳಿಕ ತಕ್ಷಣ ಸುಷ್ಮಾ ಅವರನ್ನು ಐಸಿಯುಗೆ ವರ್ಗಾವಣೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಿಡ್ನಿ ವೈಫಲ್ಯದಿಂದ ನ.07 ರಂದು ಏಮ್ಸ್ ಗೆ ದಾಖಲಾಗಿದ್ದರು. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇಂದು ಕಸಿ ಶಸ್ತ್ರವಿಕಿತ್ಸೆ ಯಶಸ್ವಿಯಾಗಿದೆ.
ರಾಷ್ಟ್ರೀಯ
Comments are closed.