ಈ ಊರಿನ ಜನ ಯಾವುದಕ್ಕೂ ಹೆದರೋದಿಲ್ಲ. ಆದ್ರೆ ಇದೊಂದು ಜಾಗವನ್ನ ಕಂಡ್ರೆ ಇವರ ಎದೆ ಝಲ್ ಅನ್ನುತ್ತೆ. ಇದೊಂದೇ ಭಯ ಇವ್ರನ್ನ ಕಾಡೋದು. ಇನ್ನುಳಿದಂತೆ ಇವರ ಬದುಕು ನಾರ್ಮಲ್ ಅಗಿದೆ.
ಈ ಹಳ್ಳಿ ಜನ ಆ ಜಾಗವನ್ನ ನೋಡಿದ್ರೇನೇ ಬೆಚ್ಚಿ ಬೀಳ್ತಾರೆ. ಆ ಜಾಗದ ಹತ್ರ ಹೋಗ್ಬೇಕು ಅಂದ್ರೂನು, ಅವರೆಲ್ಲಾ ಹೆದರಿ ಕೊಳ್ತಾರೆ. ಒಬ್ರಲ್ಲ ಇಬ್ರಲ್ಲ. ಇಡೀ ಊರಿಗೇ ಊರೇ ಆ ಜಾಗವನ್ನ ಕಂಡ್ರೆ ಹೆದರಿ ನಡುಗುತ್ತೆ. ರಾತ್ರಿ ಹೊತ್ತಲ್ಲಿ ಬಿಡಿ ಹಗಲು ಹೊತ್ತಲ್ಲೇ ಆ ಕಡೆ ಯಾರೂ ಹೋಗೋದಿಲ್ಲ. ಅಕಸ್ಮಾತ್ ಹೋಗ್ಲೇಬೇಕು ಅಂದ್ರೆ ಗುಂಪು ಗುಂಪಾಗಿ ಆ ಜಾಗಕ್ಕೆ ಹೋಗ್ತಾರೆ. ಒಬ್ರೇ ಏನಾದ್ರೂ ಆ ಕಡೆ ಹೋದ್ರೆ ಗುಂಡಿಗೆಯೊಡೆದು ನೀರಾಗಿಬಿಡುತ್ತೆ. ಯಾಕಂದ್ರೆ ಆ ಜಾಗದಲ್ಲಿ ಕೇಳಿಸುತ್ತೆ, ಸತ್ತು ಮಲಗಿದವನ ಆಕ್ರಂದನ. ಅಷ್ಟಕ್ಕೂ ಆ ಜಾಗದಲ್ಲಿ ಕೇಳಿಸೋದು ಯಾರ ಧ್ವನಿ..? ಈ ವರದಿ ನೋಡಿ.
ಈ ಊರಿನ ಜನ ಯಾವುದಕ್ಕೂ ಹೆದರೋದಿಲ್ಲ. ಆದ್ರೆ ಇದೊಂದು ಜಾಗವನ್ನ ಕಂಡ್ರೆ ಇವರ ಎದೆ ಝಲ್ ಅನ್ನುತ್ತೆ. ಇದೊಂದೇ ಭಯ ಇವ್ರನ್ನ ಕಾಡೋದು. ಇನ್ನುಳಿದಂತೆ ಇವರ ಬದುಕು ನಾರ್ಮಲ್ ಅಗಿದೆ.
ಬೆಳಗಾದ್ರೆ ಸಾಕು, ತಲೆ ಮೇಲೆ ಬುತ್ತಿ ಕಟ್ಟಿಕೊಂಡು, ಜಮೀನುಗಳಿಗೆ ಹೊರಟು ಬಿಡ್ತಾರೆ. ಸಂಜೆ ಆಗುತ್ತೋ, ರಾತ್ರಿಯಾಗುತ್ತೋ ಬರೋದು ಗೊತ್ತೇ ಆಗಲ್ಲ. ಆವತ್ತಿನ ದುಡಿಮೆ ಆಗೋವರೆಗೂ ನಾಳೆ ಊಟಕ್ಕೆ ಆಧಾರ ಸಿಗೋವರೆಗೂ, ಇವರದ್ದು ದುಡಿಮೆಯ ನಡಿಗೆನೇ.
ಬರೀ ಕೃಷಿನಾ ನಂಬ್ಕೋಂಡಿದ್ರೆ, ಹೊಟ್ಟೆ ತುಂಬಲ್ಲ. ಯಾಕಂದರೆ, ಯಾವಾಗ ಮಳೆ ಬರುತ್ತೋ, ಯಾವಾಗ ಬರಗಾಲ ಬೀಳುತ್ತೋ ಹೇಳೋದಕ್ಕಾಗಲ್ಲ. ಅದಕ್ಕೆ ಅಂತಾನೇ ಈ ಹಳ್ಳಿ ಜನ ಪಶುಸಂಗೋಪನೆಯನ್ನೂ ಮಾಡ್ತಾರೆ. ಅದರಲ್ಲೂ ಕುರಿ, ಹಸುಗಳೇ ಇವರ ಬದುಕಿಗೆ ಮೂಲಾಧಾರ.
ಈ ಜನ ಗಟ್ಟಿ ಗುಂಡಿಗೆಯ ಜನ, ಬದುಕಿನ ಏಳು ಬೀಳಿಗೆ ಇವ್ರು ಯಾವತ್ತೂ ಹೆದರಿದವರಲ್ಲ. ವಿಧಿಯಾಟಕ್ಕೂ ಜಗ್ಗಿದವರಲ್ಲ ಆದ್ರೆ ಇವ್ರನ್ನ ಬೆಚ್ಚಿ ಬೀಳಿಸಿದ್ದು, ಈ ಜಾಗ ಒಂದೇ. ಒಂದು ವರ್ಷದ ಹಿಂದೆ ಇಲ್ಲಿ ಒಬ್ಬ ವ್ಯಕ್ತಿಯನ್ನ ಹೂಳಲಾಗಿತ್ತು. ಆವತ್ತಿನಿಂದ ಇವತ್ತಿನವರೆಗೂ ಈ ಗೋರಿಯಿಂದ ಒಂದು ವಿಚಿತ್ರವಾದ ಸೌಂಡ್ ಕೇಳಿಸುತ್ತೆ.. ಅದೇನು ಅಂತ ಕಿವಿಗೊಟ್ಟು ಕೇಳಿದ್ರೆ, ಹಿಂದಿ ಭಾಷೆಯಲ್ಲಿ. ಯಾರೋ ಒಬ್ಬರು ಮಾತನಾಡಿದಂತೆ ಕೇಳಿಸುತ್ತೆ.. ‘ನಾನು ಬದುಕಿದ್ದೀನಿ –ನನ್ನನ್ನ ಹೊರ ತೆಗೀರಿ’
ಅಂದ್ಹಾಗೆ ಇಡೀ ದೇಶಾದ್ಯಂತ ಭಾರೀ ಸುದ್ದಿ ಮಾಡಿರೋ ಈ ಗೋರಿ ಇರೋದಾದ್ರೂ ಎಲ್ಲಿ ಗೊತ್ತಾ? ಉತ್ತರ ಪ್ರದೇಶದ ಮೀರತ್ ಸಮೀಪದಲ್ಲಿರೋ ಜಲಾಲ್ಪುರ್ ಅನ್ನೋ ಹಳ್ಳಿಯಲ್ಲಿ.
ಹೆಸರು ಇರ್ಫಾನ್
ಜಲಾಲ್ಪುರ್ ‘ನಲ್ಲಿ ಇತ್ತೀಚೆಗೆ 25 ವರ್ಷದ ಇರ್ಫಾನ್ ಏಕಾಏಕಿ ಹುಷಾರ್ ತಪ್ಪಿದ್ದ. ಇದ್ದಕ್ಕಿದ್ದಂತೆ ರಕ್ತದ ವಾಂತಿ ಮಾಡೋದಕ್ಕೆ ಶುರು ಮಾಡಿದ್ದ. ಇದನ್ನ ಕಂಡ ಮನೆಯವ್ರು ಎಲ್ಲಾ ಕಡೆ ತೋರಿಸಿದ್ರು. ಆದ್ರೆ ಯಾವ ಪ್ರಯೋಜನಾನೂ ಆಗ್ಲಿಲ್ಲ. ಕೊನೆಗೆ ಕಳೆದ ಫೆಬ್ರವರಿನಲ್ಲಿ ಸಾವಿಗೀಡಾಗ್ತಾನೆ ಇರ್ಫಾನ್. ಆತನನ್ನ ತಗೊಂಡು ಬಂದು, ಈ ಜಾಗದಲ್ಲಿ ಹೂಳಲಾಗುತ್ತೆ. ಆ ಕ್ಷಣದಿಂದಲೇ ನೋಡಿ.. ಈ ಗೋರಿಯೊಳಗೆ ಅವನ ಧ್ವನಿ ಕೇಳಿಸೋದಕ್ಕೆ ಶುರುವಾಗೋದು.
ಬಹುಶಃ ಯಾರೋ ಆಗದವರು ಮಾಟ ಮಂತ್ರದಿಂದ ಇರ್ಫಾನ್ನನ್ನ ಕೊಂದು ಹಾಕಿದ್ದಾರೆ. ಹೀಗಾಗಿ ಅವನ ಆತ್ಮ ಸೇಡಿಗಾಗಿ ಕಾಯ್ತಾ ಇದೆ. ಆತ್ಮಕ್ಕೆ ಮುಕ್ತಿ ಸಿಗದೇ, ನಾನು ಹೊರಗೆ ಬರ್ತೀನಿ. ನನ್ನನ್ನ ಕಾಪಾಡಿ ಅಂತ ಕೂಗ್ತಿದ್ಯಂತೆ ಆ ಆತ್ಮ.
ಆದರೆ ಸಂಶೋಧನೆಗೆ ನಿಂತಾಗ ಬಯಲಾಯ್ತು ಸತ್ಯ
ಜಲಾಲ್ಪುರ್ದ ಗೋರಿ ವಿಚಾರ ಎಲ್ಲೆಡೆ ಮಿಂಚಿನಂತೆ ಹಬ್ಬುತ್ತಿದ್ದಂತೆ, ಜಿಲ್ಲಾ ಮ್ಯಾಜಿಸ್ಟ್ರೇಟರ್, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ತಜ್ಞ ವೈದ್ಯರು ಇಲ್ಲಿಗೆ ಭೇಟಿ ನೀಡಿದ್ರು. ಆದ್ರೆ ಯಾರಿಗೂ ಗೋರಿಯೊಳಗಿಂದ ಯಾವ ಶಬ್ಧ ವೂ ಕೇಳಿಸಲಿಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅಧಿಕಾರಿಗಳು, ಇದೊಂದು ಮಾನಸಿಕ ಕಾಯಿಲೆ ಅಂತ ಹೇಳಿದ್ರು.
ಯಾಱರು ಈ ಗೋರಿಯೊಳಗಿಂದ ಇರ್ಫಾನ್ ಧ್ವನಿಯನ್ನ ಕೇಳಿದ್ದೀವಿ ಅಂತಾರೋ, ಅವರೆಲ್ಲಾ ಮಾನಸಿಕವಾಗಿ ಬಳಲುತ್ತಿರಬಹುದು. ದೆವ್ವ ಭೂತಗಳನ್ನು ಹೆಚ್ಚಾಗಿ ನಂಬುವ ವ್ಯಕ್ತಿಗಳಿಗಷ್ಟೇ ಇಂಥಾ ಅನುಭವ ಆಗುತ್ತೆ. ಜೊತೆಗೆ ಇರ್ಫಾನ್ ಮೇಲೆ ಯಾರ್ಯಾರಿಗೆ ಹೆಚ್ಚು ಪ್ರೀತಿ ಇತ್ತೋ ಯಾಱರಿಗೆ ಆತನ ಜೊತೆ ಜಾಸ್ತಿ ಅಟ್ಯಾಚ್ಮೆಂಟ್ ಇತ್ತೋ ಅವರಿಗೆ ಆತನ ಸಾವನ್ನ ಅರಗಿಸಿಕೊಳ್ಳುವ ಶಕ್ತಿ ಇರೋದಿಲ್ಲ. ಅಂಥವರಿಗೆ ಅವನ ಧ್ವನಿ ಕೇಳಿಸಿದಂತೆ ಭಾಸವಾಗುತ್ತೆ. ಅವನು ನಮ್ಮ ನಡುವೇನೇ ಇದ್ದಾನೆ ಅನ್ನೋ ಥರ ಫೀಲ್ ಆಗುತ್ತೆ. ಇದು ಮಾನಸಿಕ ಖಾಯಿಲೆನೇ ಹೊರತು, ಇನ್ಯಾವ ದೆವ್ವ ಭೂತಾನೂ ಇಲ್ಲ ಅಂತಾರೆ ತಜ್ಞರು.
ಇಷ್ಟೇ ಅಲ್ಲ. ಬಹುಶಃ ಈ ಗೋರಿಯೊಳಗೆ ಯಾವುದೋ ಒಂದು ಚಿಕ್ಕ ಪ್ರಾಣಿ ಸಿಲುಕಿರುವ ಸಾಧ್ಯತೆ ಇದೆ. ಅದು ಒಳಗಿಂದ ಶಬ್ಧ ಮಾಡುತ್ತಿರಬಹುದು. ಆ ಶಬ್ಧವನ್ನೇ ಊರಿನ ಜನರು ಆತ್ಮದ ಕೂಗು ಅಂತ ತಿಳಿದುಕೊಂಡಿರಬಹುದು. ಆದ್ರೆ ವಾಸ್ತವಿಕವಾಗಿ ಇಲ್ಲಿ ಅಂಥಾ ಸಮಸ್ಯೆ ಏನೂ ಇಲ್ಲ. ಇಲ್ಲಿ ಯಾರ ಧ್ವನಿಯೂ ಕೇಳೋದಿಲ್ಲ ಅಂತಾರೆ ತಜ್ಞರು.
ಸಂಶೋಧಕರು ಏನೇ ಹೇಳಲಿ, ಆದ್ರೆ ಇಲ್ಲಿನ ಜನರಿಗೆ ಅದ್ಯಾವುದೂ ಗೊತ್ತಾಗ್ತಿಲ್ಲ. ಈ ಗೋರಿಯಿಂದ ಏನೋ ಶಬ್ಧ ಕೇಳಿಸ್ತಾ ಇದೆ. ಆ ಶಬ್ಧ ಇರ್ಫಾನ್ನದ್ದೇ ಅಂತ ಬಲವಾಗಿ ನಂಬಿದ್ದಾರೆ. ನನ್ನನ್ನ ಗೋರಿಯಿಂದ ಹೊರಗೆ ತೆಗೀರಿ.. ನಾನು ಬದುಕಿದ್ದೀನಿ ಅಂತ ಅವನ ಆತ್ಮವೇ ಆಕ್ರಂದಿಸ್ತಿದೆ ಅಂತ ಇವ್ರೆಲ್ಲಾ ಅಂದುಕೊಂಡಿದ್ದಾರೆ.
ಕರ್ನಾಟಕ
Comments are closed.