ಮ್ಯಾನ್ಮಾರ್‌ನಲ್ಲಿ 99 ದಶಲಕ್ಷ ವರ್ಷಗಳ ಹಿಂದೆ ಸಂರಕ್ಷಿಸಿಡಲಾಗಿದ್ದ ಡೈನೋಸರ್ ಬಾಲವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಡೈನೋಸರ್ ಪಳೆಯುಳಿಕೆ ಪುರಾವೆಗಳಿಂದ ಈವರೆಗೆ ಪತ್ತೆಹಚ್ಚಲಾಗದ ಅಂಶಗಳಾದ ಡೈನೋಸರ್ ಗರಿಯ ರಚನೆ ಮತ್ತು ಅವುಗಳ ಉಗಮದ ಕುರಿತು ಈ ಬಾಲದ ಅಧ್ಯಯನದಿಂದ ಅರಿತುಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಡೈನೋಸರ್ ಬಾಲ ಮತ್ತು ಬೆನ್ನು ಮೂಳೆ ಸೇರಿ ಒಟ್ಟು 8 ಅಂಶಗಳನ್ನು 3ಡಿ ಮೈಕ್ರೊಸ್ಕೋಪಿಕ್‌ನಲ್ಲಿ ಸಂರಕ್ಷಿಸಿಡಲಾಗಿದೆ ಎಂದು ಕೆನಡಾದ ರಾಯಲ್ ಸಾಸ್ಕಟ್ಚೆವಾನ್ ಮ್ಯೂಸಿಯಂನ ರ್ಯಾನ್ ಮೆಕೆಲ್ಲರ್ ಹೇಳಿದ್ದಾರೆ.
Comments are closed.