ಎರಡು ಸಾವಿರಕ್ಕೂ ಹೆಚ್ಚು ಮಂದಿಯಿಂದ ಸೈಕಲ್ ರ್ಯಾಲಿ
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಡಿ.11: ಸ್ವಸ್ತಿ ಆರ್ಎಕ್ಸ್ ಟ್ರಸ್ಟ್ ಹಮ್ಮಿಕೊಂಡಿರುವ 10ನೇ ವರ್ಷದ ಆರ್ಎಕ್ಸ್ ಲೈಫ್ ಹರ್ ಕ್ಯುಲಸ್ ಸೈಕಲ್ ರ್ಯಾಲಿ ರವಿವಾರ ಬೆಳಿಗ್ಗೆ 6 ಗಂಟೆಗೆ ನಗರದ ಮಂಗಳಾ ಕ್ರೀಡಾಂಗಣದ ಮುಂಭಾಗದಿಂದ ಆರಂಭಗೊಂಡಿತ್ತು.
ಸ್ವಸ್ತಿ ಆರ್.ಎಕ್ಸ್ ಲೈಫ್ ಟ್ರಸ್ಟ್ ನ ಟ್ರಸ್ಠಿಗಳಾದ ಡಾ.ಗಾಯತ್ರಿ, ವಂದನಾ ನಾಯಕ್, ರ್ಯಾಲಿ ಸಂಯೋಜಕ ಗಿರಿಧರ್ ಕಾಮಾತ್, ನಗರದ ಉದ್ಯಮಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಮತ್ತಿತ್ತರರು ಈ ವೇಳೆ ಉಪಸ್ಥಿತರಿದ್ದರು. ನರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ರಸ್ತೆ ಸುರಕ್ಷತೆ ಈ ಸಲದ ರ್ಯಾಲಿಯ ಉದ್ದೇಶವಾಗಿದ್ದು ” ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ: ಧೈಯ ವಾಕ್ಯ .ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಆಗ್ರಹಿಸಲು ಹಾಗೂ ಚತುಷ್ಚಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ರ್ಯಾಲಿ ಸಂಯೋಜಕ ಗಿರಿಧರ್ ಕಾಮಾತ್ ಅವರು ಈ ವೇಳೆ ತಿಳಿಸಿದರು.
10 ವರ್ಷದ ಪುಟಾಣಿಗಳಿಂದ ಹಿಡಿದು 86 ವರ್ಷದ ವಯೋವೃದ್ಧರವರೆಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಗರದ ಮಂಗಳಾ ಸ್ಟೇಡಿಯಂ ಮುಂಭಾಗದಿಂದ ಆರಂಭಗೊಂಡ ರ್ಯಾಲಿಯು ಲೇಡಿಹಿಲ್, ಕೊಟ್ಟಾರ, ಕುಳೂರು, ಪಣಂಬೂರು-ಉರ್ವಸ್ಟೋರ್- ಅಶೋಕನಗರ- ಹೊಯ್ಗೆ ಬೈಲ್ – ಬತ್ತೇರಿ ಮಾರ್ಗವಾಗಿ ಸಾಗಿ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಸಮಾರೋಪಗೊಂಡಿತ್ತು.
ಕನ್ನಡಿಗ ವರ್ಲ್ಡ್ ಛಾಯಾಚಿತ್ರ ಸ್ಪರ್ಧೆ:
ಇದೇ ಸಂದರ್ಭದಲ್ಲಿ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಪ್ರಯೋಜಕತ್ವದಲ್ಲಿ ಸೈಕಲ್ ರ್ಯಾಲಿಯ ಪೋಟೊ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸಮೂಹ ಸವಾರಿ (ರೈಡಿಂಗ್ ಟುಗೆದರ್ ) ಕಲ್ಪನೆಯೊಂದಿಗೆ ಹಮ್ಮಿಕೊಂಡಿರುವ ಈ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿಸೆ. ಚಿತ್ರವನ್ನು ರ್ಯಾಲಿಯ ಸಮಯದಲ್ಲಿ ಸೆರೆಹಿಡಿದು, ಒಬ್ಬರು 3 ಫೋಟೊವನ್ನು ಕಳಿಸುವಂತೆ ಕೋರಲಾಗಿದೆ.
ಕಳಿಸಬೇಕಾದ ವಿಳಾಸ :svastirxlife@gmail.com, ಡಿಸೆಂಬರ್ 20 ರ ಒಳಗೆ ಒಳಗೆ ಕಳುಹಿಸಬೇಕು ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆಯ್ದು ಮೂರು ಫೋಟೊಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಪೋಟೊ ಸ್ಪರ್ಧೆಯ ಸಂಘಟಕ ಸುನೀಲ್ ದತ್ತ್ ಪೈ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844230531 ಅನ್ನು ಸಂಪರ್ಕಿಸ ಬಹುದು.
Comments are closed.