ಕರ್ನಾಟಕ

ದಟ್ಟ ಮಂಜು: ಬೆಂಗಳೂರಿನಲ್ಲಿ 90 ವಿಮಾನಗಳ ಹಾರಾಟ ವ್ಯತ್ಯಯ

Pinterest LinkedIn Tumblr

plane-final
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಸುತ್ತಮುತ್ತ ಮಂಗಳವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ 90 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

‘ಬೆಳಿಗ್ಗೆ 5ರಿಂದ 8ರವರೆಗೆ ಮಂಜು ದಟ್ಟವಾಗಿ ಆವರಿಸಿದ್ದ ಕಾರಣ ರನ್‌ವೇ ಸಹ ಕಾಣಿಸುತ್ತಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ದೇಶದ ನಾನಾ ಭಾಗಗಳು ಹಾಗೂ ವಿದೇಶಗಳಿಗೆ ಹೊರಡಬೇಕಿದ್ದ 51 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು’ ಎಂದು ಕೆಐಎಎಲ್ ಕಾರ್ಪೊರೇಟ್ ಸೇವೆಗಳ ವಿಭಾಗದ ಸರೋಜ್‌ ಜೋಸೆಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪೈಕಿ ನಾಲ್ಕು ಅಂತರರಾಷ್ಟ್ರೀಯ ವಿಮಾನಗಳಿದ್ದು, ಬ್ರಿಟಿಷ್‌ ಏರ್‌ವೇಸ್‌, ಏರ್‌ ಮಾರಿಷಸ್‌, ಜೆಟ್‌ ಏರ್‌ವೇಸ್‌ ಮತ್ತು ಇಂಡಿಗೊ ವಿಮಾನಗಳನ್ನು ಒಳಗೊಂಡಿವೆ. ಇದರ ಜತೆಗೆ ಸಿಂಗಪುರ ಸರಕು ಸಾಗಣೆ ವಿಮಾನಗಳು ನಿರ್ದಿಷ್ಟ ಸಮಯಕ್ಕೆ ಹೊರಡಲಿಲ್ಲ.’

‘ವ್ಯತ್ಯಯದಿಂದಾಗಿ ಸಾವಿರಾರು ಪ್ರಯಾಣಿಕರು ವಿಮಾನಗಳಲ್ಲೇ ಕಾಲ ಕಳೆಯಬೇಕಾಯಿತು. ಬೇರೆ ರಾಜ್ಯ, ದೇಶಗಳಿಂದ ಬರಬೇಕಿದ್ದ ವಿಮಾನಗಳು 8 ಗಂಟೆಯ ನಂತರ ವಿಮಾನ ನಿಲ್ದಾಣದಲ್ಲಿ ಇಳಿದವು’ ಎಂದು ಹೇಳಿದರು.

Comments are closed.