ನವದೆಹಲಿ(ಡಿ.21): ವಿಮಾನದ ಲ್ಯಾಂಡಿಂಗ್ ವೇಳೆ ಮಾನವ ತ್ಯಾಜ್ಯವನ್ನ ಮನೆಗಳ ಎಸೆದರೆ ಆ ವಿಮಾನದ ವೈಮಾನಿಕ ಸಂಸ್ಥೆಗೆ 50 ಸಾವಿರ ದಂಡ ವಿಧಿಸುವಂತೆ ಆದೇಶಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀರ್ಪು ನೀಡಿದೆ.
ಡಿಜಿಸಿಎಗೆ ಈ ಕುರಿತಂತೆ ಆದೇಶ ನೀಡಿರುವ ಪೀಠ, ಲ್ಯಾಂಡಿಂಗ್ ವೇಳೆ ಟಾಯ್ಲೆಟ್ ಟ್ಯಾಂಕರ್`ಗಳನ್ನ ಓಪನ್ ಮಾಡಿ ಮಾನವ ತ್ಯಾಜ್ಯವನ್ನ ಹೊರಗೆಸೆದ ವಿಮಾನಗಳ ಮಾಲೀಕತ್ವದ ಏರ್`ಲೈನ್ಸ್ ಕಂಪನಿಗೆ ದಂಡ ವಿಧಿಸುವಂತೆ ಆದೇಶಿಸಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಾಸವಿರುವ ನಿವೃತ್ತ ಸೇನಾಧಿಕಾರಿಯೊಬ್ಬರು` ತಮ್ಮ ಮನೆಗಳ ಮೇಲೆ ವಿಮಾನದಿಂದ ಮಾನವ ತ್ಯಾಜ್ಯ ಬೀಳುತ್ತಿರುವ ಬಗ್ಗೆ ಆರೋಪಿಸಿ ಕೇಸ್ ದಾಖಲಿಸಿದ್ದರು.
ಸಾಮಾನ್ಯವಾಗಿ ವಿಮಾನ ಲ್ಯಾಂಡ್ ಆದ ಬಳಿಕ ಮಾನವ ತ್ಯಾಜ್ಯವನ್ನ ಹೊರಗೆ ಹಾಕಲಾಗುತ್ತದೆ. ಆದರೆ, ಕೆಲವೊಮ್ಮೆ ಲ್ಯಾಂಡಿಂಗ್ ವೇಳೆಗೆ ಟಾಯ್ಲೆಟ್ ಟ್ಯಾಂಕರ್ ಓಪನ್ ಮಾಡಿ ಹೊರಗೆಸೆದ ಬಗ್ಗೆ ವರದಿಗಳಾಗಿವೆ.
ರಾಷ್ಟ್ರೀಯ
Comments are closed.