ಪುಣೆ: ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದ ತಂದೆಯ ಆಶಯದಂತೆ ಪುತ್ರ ಪುಣೆ ಆಸ್ಪತ್ರೆಯ ಐಸಿಯುನಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿ ತಂದೆಯ ಕೊನೆಯ ಆಸೆಯನ್ನು ಪೂರೈಸಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಹೊರತಾಗಿ ಯಾರಿಗೂ ಅಷ್ಟಾಗಿ ಪ್ರವೇಶವಿರುವುದಿಲ್ಲ. ಆದರೆ ಪುಣೆಯ ಆಸ್ಪತ್ರೆಯು ಅಸಾಮಾನ್ಯ ನಿರ್ಧಾರದಿಂದ ಜಗಜ್ಜಾಹೀರಾಗಿದೆ. ಆಸ್ಪತ್ರೆಯ ನಿರ್ದೇಶಕರು ಐಸಿಯುನಲ್ಲಿ ವಿವಾಹಕ್ಕೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದೆ.
ಪುಣೆಯ ಉದ್ಯಮಿಯಾಗಿರುವ 34 ವರ್ಷದ ಡ್ಯಾನಿಶ್ ಎನ್ ದೇವ್ ತಂದೆ 67 ವರ್ಷದ ನಂದಕುಮಾರ್ ದೇವ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಂದೆಯ ಆಶಯದಂತೆ ಪುತ್ರ ಅವರ ಕೊನೆಯ ಆಸೆಯನ್ನು ಪೂರೈಸಿದ್ದಾನೆ.
ಹೃದಯಾಘಾತದಿಂದಾಗಿ ಕೆಲ ದಿನಗಳ ಹಿಂದೆ ತಂದೆ ನಂದಕುಮಾರ್ ದೇವ್ ಅವರನ್ನು ಪುಣೆಯ ದೀನನಾತ ಮಂಗೇಶ್ಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿನ ಕಳೆದಂತೆ ಅವರಿಗೆ ಶ್ವಾಸಕೋಶದ ಸೋಂಕು ತಗುಲಿದ್ದು ಅವರನ್ನು ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರಿಳಿತವಾಗುತ್ತಿತ್ತು ಎಂದು ನಂದಕುಮಾರ್ ದೇವ್ ಅವರ ಪುತ್ರ ದ್ಯಾನೇಶ್ ಹೇಳಿದ್ದಾರೆ.
ನನ್ನ ಮದುವೆಗೂ ಮುನ್ನ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಆರೋಗ್ಯ ಸುಧಾರಿಸುತ್ತದೆ ಎಂಬ ಆಶಾ ಭಾವನೆಯನ್ನು ಆಸ್ಪತ್ರೆಯ ವೈದ್ಯರು ನೀಡದ ಕಾರಣ ನಾನು ನನ್ನ ತಾಯಿ ಮತ್ತು ಅಕ್ಕ, ವದುವಿನ ಪೋಷಕರೊಂದಿಗೆ ಚರ್ಚಿಸಿ ನನ್ನ ತಂದೆಯ ಆಸೆಯನ್ನು ತಿಳಿಸಿದೆ. ಬಳಿಕ ಆಸ್ಪತ್ರೆಯಲ್ಲಿ ಮುದವೆ ಕುರಿತಂತೆ ಎಲ್ಲರು ಒಂದು ತೀರ್ಮಾನಕ್ಕೆ ಬಂದೆವು ಎಂದು ದೇವ್ ಅವರು ಭಾವನಾತ್ಮಕವಾಗಿ ಮಾತನಾಡಿದರು.
ನಂತರ ಆಸ್ಪತ್ರೆಯ ನಿರ್ದೇಶಕರಾದ ಧನಂಜಯ್ ಕೆಲ್ಕರ್ ಮತ್ತು ಇನ್ನಿತರರೊಂದಿಗೆ ಮದುವೆ ವಿಷಯವಾಗಿ ಚರ್ಚಿಸಿದೆ. ಅವರು ಡಿಸೆಂಬರ್ 17 ಮಧ್ಯಾಹ್ನ ಮದುವೆಯಾಗುವುದಕ್ಕೆ ಅನುಮತಿ ನೀಡಿದರು. ಅಂತೆ ಶಾಸ್ತ್ರೋಕ್ತವಾಗಿ ನಾನ್ನ ಮತ್ತು ಸುರ್ವಣ ಮದುವೆ ನಡೆಯಿತು ಎಂದರು. ಬಳಿಕ ತಂದೆಯ ಆಶೀರ್ವಾದ ಪಡೆದರು. ಇದಾದ 12 ಗಂಟೆಗಳ ನಂತರ ತಂದೆ ವಿಧಿವಶರಾದರು ಎಂದು ದೇವ್ ಭಾವೋದ್ವೇಗಕ್ಕೊಳಗಾದರು.
ರಾಷ್ಟ್ರೀಯ
Comments are closed.