ನವದೆಹಲಿ: ಇನ್ಮುಂದೆ ಬ್ಯಾಂಕಲ್ಲಿ ಚೆಕ್ ಪಾಸ್ ಆಗಬೇಕಾದರೆ ಆಧಾರ್ ನಂಬರ್ ಕಡ್ಡಾಯವಾಗಲಿದೆ. ನೋಟ್ ಬ್ಯಾನ್ ಬಳಿಕ ಕೇಂದ್ರ ಸರ್ಕಾರ ಎಲ್ಲಾ ಚೆಕ್‍ಗಳಲ್ಲಿ ಆಧಾರ್ ನಂಬರ್ ನೋಂದಣಿಯನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಹೊಸದಾಗಿ ಮುದ್ರಣವಾಗುವ ಚೆಕ್‍ಗಳಲ್ಲಿ ನಿಮ್ಮ ಆಧಾರ್ ನಂಬರ್ ಕೂಡಾ ಮುದ್ರಣವಾಗಲಿದೆ ಅಥವಾ ಆಧಾರ್ ನಂಬರ್ ದಾಖಲಿಸಲು ಪ್ರತ್ಯೇಕ ಕಾಲಂ ಮುದ್ರಣವಾಗಲಿದೆ. ಈ ಮೂಲಕ ಹಣ ಪಡೆಯುವ ಮತ್ತು ಕೊಡುವ ಎಲ್ಲರ ಮಾಹಿತಿಯೂ ಐಟಿ ಅಧಿಕಾರಿಗಳ ಕೈ ಸೇರಲಿದೆ.
ಬ್ಯಾಂಕ್ ಅಧಿಕಾರಿಗಳ ಪ್ರಕಾರ ಈಗಾಗಲೇ ಈ ಯೋಜನೆ ಪ್ರಾಯೋಗಿಕವಾಗಿ ಆರಂಭವಾಗಿದೆ. ಭಾರೀ ಮೊತ್ತದ ಚೆಕ್ ತೆಗೆದುಕೊಂಡು ಬರುವವರ ಚೆಕ್‍ನ ಹಿಂಬದಿಯಲ್ಲೇ ಬ್ಯಾಂಕ್ ಅಧಿಕಾರಿಗಳು ಆಧಾರ್ ನಂಬರ್ ಬರೆಸುತ್ತಿದ್ದಾರೆ. ಇನ್ನು ಮುಂದೆ ಜಾರಿಯಾಗಲಿರುವ ಚೆಕ್ ಬುಕ್‍ಗಳಲ್ಲಿ ಖಾತೆ ಹೊಂದಿರುವವರ ಆಧಾರ್ ನಂಬರ್ ಕೂಡಾ ಮುದ್ರಣಗೊಳ್ಳಲಿದೆ. ಹೀಗೆ ಕಪ್ಪು ಹಣವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ನೋಟ್ ಬ್ಯಾನ್ ಬಳಿಕ ಆಧಾರ್ ಕಾರ್ಡ್ ನೀಡದೆ ಚೆಕ್ ಪಾಸ್ ಮಾಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಈಗಾಗಲೇ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ. ಕೇಂದ್ರದ ಹೋಸ ನೀತಿಯಿಂದಾಗಿ ಹೊಸ ಚೆಕ್ ಬುಕ್‍ಗಾಗಿ ಎಲ್ಲರೂ ಅಪ್ಲೈ ಮಾಡಲೇಬೇಕು. ಆದರೆ ಈ ಆದೇಶ ಯಾವಾಗಿನಿಂದ ಜಾರಿಗೆ ಬರಲಿದೆ ಎನ್ನುವುದು ಇನ್ನಷ್ಟೇ ಪ್ರಕಟವಾಗಬೇಕಿದೆ.
Comments are closed.