ನವದೆಹಲಿ(ಜ.06): ಹೊಸ ವರ್ಷದ ಹಿಂದಿನ ರಾತ್ರಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದಂತಹ ಅಮಾನುಷ ಲೈಂಗಿಕ ದೌರ್ಜನ್ಯ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ನಡೆದಿರುವುದು ಈಗ ತಡವಾಗಿ ವರದಿಯಾಗಿದೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ಚಿತ್ರಿಕೆಯಲ್ಲಿ ಕಂಡು ಬರುವಂತೆ ಮದ್ಯದ ಅಮಲಿನಲ್ಲಿದ್ದ ಕಾಮುಕರಿಂದ ಮಹಿಳೆಯೋರ್ವರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಲು ಯತ್ನಿಸಿದ ನಾಲ್ವರು ಪೊಲೀಸರ ಮೇಲೆ ಆ ಕಾಮಾಂಧ ತರುಣರು ಹಲ್ಲೆ ನಡೆಸಿದ್ದಾರೆ.
ಈಶಾನ್ಯ ದಿಲ್ಲಿಯ ಮುಖರ್ಜಿ ನಗರದಲ್ಲಿ ನಡೆದಿರುವ ಈ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಸಣ್ಣ ವಯಸ್ಸಿನ ಮಹಿಳೆಯೋರ್ವರು ರಾತ್ರಿಯ ವೇಳೆ ತಮ್ಮ ಬೈಕಿನಲ್ಲಿ ಬರುತ್ತಿದ್ದರು. ಮದ್ಯದ ಅಮಲಿನಲ್ಲಿದ ನಾಲ್ವರು ಕಾಮುಕರು ಆಕೆಯನ್ನು ಬೈಕಿನಿಂದ ಕೆಳಗೆಳೆದು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಇದನ್ನು ತಪ್ಪಿಸಲು ಮುಂದಾದ ಪೊಲೀಸರ ಮೇಲೆ ಈ ಯುವಕರು ಹಲ್ಲೆ ಮಾಡಿ ಅವರನ್ನು ಗಾಯಗೊಳಿಸಿದ್ದಾರೆ. ಮಾತ್ರವಲ್ಲದೆ ಪೊಲೀಸ್ ವಾಹನ ಮತ್ತು ಚೆಕ್ ಪೋಸ್ಟ್ ಮೇಲೂ ಅವರು ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ
Comments are closed.