ನಟಿ ನಮಿತಾ ಏನಾದರು ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ನೋಡಿ ಸುದ್ದಿ. ಸದ್ಯಕ್ಕೆ ಕೈಯಲ್ಲಿ ಕೆಲಸವಿಲ್ಲದೆ ಆ ವುಡ್ಡು ಈ ವುಡ್ಡು ಎಂದು ಅಲೆದದ್ದೇ ಬಂತು. ಚಿತ್ರರಂಗ ಕೈಹಿಡಿಯದಿದ್ದರೆ ಏನಂತೆ ಒಂದು ಕೈ ರಾಜಕೀಯದಲ್ಲೂ ನೋಡೋ ಬಿಡೋಣ ಎಂದು ಹೊರಟರು.
ಚೆನ್ನೈನಲ್ಲಿ ಮನೆ ಮಾಡಿಕೊಂಡಿರುವ ನಮಿತಾ ಪರಿಸ್ಥಿತಿ ಈಗ ಬಾಡಿಗೆ ಕಟ್ಟಕ್ಕೂ ತತ್ವಾರ ಪಡುವಂತಾಗಿದೆ. ನುಂಗಂಬಾಕ್ಕಂನಲ್ಲಿನ ವೀರಭದ್ರಪ್ಪ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದಾರ ನಮಿತಾ. ಇತ್ತೀಚೆಗೆ ಬಾಡಿಗೆ ವಿಚಾರವಾಗಿ ಮನೆ ಯಜಮಾನ ಕರುಪ್ಪಯ್ಯ ನಾಗೇಂದ್ರರಿಗೂ ನಮಿತಾಗೂ ಕಿತ್ತಾಟ ಶುರುವಾಗಿದೆ.
ಇದರಿಂದ ಬೇಸತ್ತ ನಮಿತಾ, ಬಾಡಿಗೆ ಮನೆಯ ಮಾಲೀಕರಿಂದ ನನಗೆ ತೊಂದರೆಯಾಗುತ್ತಿದೆ ಎಂದು ನುಂಗಂ ಬಾಕ್ಕಂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲವಂತೆ. ನಮಿತಾ ಸುಮ್ಮನಿರ್ತಾರಾ, ಚೆನ್ನೈನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮೊರೆಹೋದರುಉ.
ಮನೆ ಮಾಲೀಕರು ಮನೆ ಖಾಲಿ ಮಾಡಿಸಲು ಪ್ರಯತ್ನಿಸುತ್ತಿದ್ದಾರೆಂದು, ರೌಡಿಗಳನ್ನು ಚೂ ಬಿಡುತ್ತಿದ್ದಾರೆಂದು ಆರೋಪಿಸಿದ್ದರು. ಮನೆಯ ಮಾಲೀಕರು ನನಗೆ ಯಾವುದೇ ತೊಂದರೆ ಕೊಡದಂತೆ ಎಚ್ಚರಿಸಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಅದರಂತೆ ನ್ಯಾಯಾಲಯ ಮನೆಯ ಮಾಲೀಕರಿಗೆ ತೊಂದರೆ ಕೊಡದಂತೆ ಆದೇಶಿಸಿದೆ.
Comments are closed.