ಕರಾವಳಿ

ಉಳ್ಳಾಲದಲ್ಲಿ 25 ಮಂದಿಯ ತಂಡದಿಂದ ಇಬ್ಬರು ಯುವಕರ ಮೇಲೆ ಹಲ್ಲೆ : ಕೊಲೆಗೆ ಯತ್ನ

Pinterest LinkedIn Tumblr

ಉಳ್ಳಾಲ, ಜನವರಿ.8: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಕೊಲೆ ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ನಡೆದಿದೆ.

ಬಂಡಿಕೊಟ್ಯ ನಿವಾಸಿ ನಿಫಾನ್ (21) ಹಾಗೂ ಮುಕ್ಕಚ್ಚೇರಿ ನಿವಾಸಿ ಹನೀಫ್ (21) ಎಂಬವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಇವರ ಇಬ್ಬರ ಮೇಲೆ ಲಾರಿ ಢಿಕ್ಕಿ ಹೊಡೆಸಿ, ಮರದ ದಿಮ್ಮಿಯಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದೆ ಎನ್ನಲಾಗಿದೆ.

ಶರೀಫ್, ಇಮ್ತಿಯಾಝ್, ಆತುಫ್, ಇರ್ಷಾದ್, ಹಕೀಂ ಮತ್ತು ಇಬ್ಬರು ಸಹೋದರರ ಸಹಿತ 25 ಮಂದಿಯ ತಂಡ ತಲವಾರು, ದೊಣ್ಣೆಗಳಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.

ಇಲೆಕ್ಷ್ಟೀಷಿಯನ್ ಕೆಲಸ ಮಾಡುತ್ತಿರುವ ನಿಫಾನ್ ಮತ್ತು ಹನೀಫ್ ಕೆಲಸದ ನಿಮಿತ್ತ ಉಳ್ಳಾಲ ಕಡೆಗೆ ಆಕ್ಟೀವಾ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಭಾಗದಿಂದ ಮರಳು ಹೇರಿಕೊಂಡು ಬಂದ ಲಾರಿ ಸ್ಕೂಟರಿಗೆ ಢಿಕ್ಕಿ ಹೊಡೆಸಿ ಇಬ್ಬರನ್ನು ಕೆಳಗೆ ಉರುಳಿಸಿದ್ದಾರೆ.

ಬಳಿಕ ಮರದ ದಿಮ್ಮಿಯಿಂದ ಬಡಿದು ಕೊಲೆಗೆ ಯತ್ನಿಸಿದ್ದಾರೆ. ಆರೋಪಿಗಳು ನಿಫಾನ್ ಬಳಿಯಿದ್ದ ರೂ.25,000 ನಗದು ದೋಚಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.