https://youtu.be/l11jxsAjFqw
ಬಾಲಸೋರ್ (ಒಡಿಶಾ): ಮೊಬೈಲ್ ಕದ್ದಿದ್ದಾರೆಂಬ ಆರೋಪದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರಿಗೆ ರೈಲ್ವೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಇಲ್ಲಿನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರೊಬ್ಬರು ಅಂಗವಿಕಲ ವ್ಯಕ್ತಿಗೆ ಥಳಿಸುತ್ತಿರುವುದನ್ನು ಮೊಬೈಲ್ನಲ್ಲಿ ಚಿತ್ರಿಕರಿಸಿ ಯೂಟೂಬ್ಗೆ ಅಪ್ಲೋಡ್ ಮಾಡಿದ್ದಾರೆ.
ಅಂಗವಿಕಲ ವ್ಯಕ್ತಿ ಎಂಬುದನ್ನು ಮರೆತ ರೈಲ್ವೆ ಪೊಲೀಸರು ಅಸಹಾಯಕನ ಎದೆಗೆ, ಬೆನ್ನಿಗೆ ಬೂಟಿನ ಕಾಲಿನಲ್ಲಿ ಹಿಗ್ಗಾಮುಗ್ಗಾ ಥಳಿಸುವ ಮೂಲಕ ರಾಕ್ಷಸರಂತೆ ವರ್ತಿಸಿದ್ದಾರೆ. ಪೊಲೀಸರ ಈ ಕೃತ್ಯಕ್ಕೆ ದೇಶದೆಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Comments are closed.