ರಾಷ್ಟ್ರೀಯ

ಕುಡಿದು ಗುಡಿಸಲಿಗೆ ಕಾರು ನುಗ್ಗಿಸಿದ ಮಾಜಿ ಶಾಸಕನ ಪುತ್ರ: ನಾಲ್ವರು ಸಾವು

Pinterest LinkedIn Tumblr

ಲಖನೌ : ಉತ್ತರ ಪ್ರದೇಶದ ಮಾಜಿ ಶಾಸಕರ ಮಗನೊಬ್ಬ ಪಾನಮತ್ತನಾಗಿ ರಸ್ತೆ ಬದಿಯಲ್ಲಿದ್ದ ಗುಡಿಸಲಿಗೆ ಕಾರು ನುಗ್ಗಿ ಸಿದ ಪರಿಣಾಮ ನಾಲ್ವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಇಲ್ಲಿನ ದಾಲಿಬಾಗ್‌ ಪ್ರದೇಶದಲ್ಲಿ ಈ ಅವಘಡ ನಡೆದಿದ್ದು ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಮದ್ಯಪಾನ ಮಾಡಿರುವುದೇ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ  ಕಾರಿನಲ್ಲಿದ್ದ ಮಾಜಿ ಶಾಸಕನ ಪುತ್ರ ಹಾಗೂ ಓರ್ವ ಉದ್ಯಮಿಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.