ಕರ್ನಾಟಕ

ನರ್ಸ್‌ ಒಬ್ಬಳನ್ನು ಬಳಸಿಕೊಂಡು ಹನಿಟ್ರ್ಯಾಪ್‌ ನಡೆಸುತ್ತಿದ್ದ ಖತರ್ನಾಕ್‌ ಸೆರೆ; ವಂಚನೆಗೊಳಗಾದ ಹಲವು ಗಣ್ಯರು, ಸಿರಿವಂತರು

Pinterest LinkedIn Tumblr

ಶಿವಮೊಗ್ಗ: ಇಲ್ಲಿ ಹನಿಟ್ರ್ಯಾಪ್‌ ನಡೆಸಿ ಹಣ ಮಾಡುತ್ತಿದ್ದ ಖತರ್ನಾಕ್‌ ಒಬ್ಬನನ್ನು ತುಂಗಾನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ಗಾಡಿಕೊಪ್ಪ ನಿವಾಸಿ ಪ್ರಕಾಶ್‌ (38) ಎಂದು ತಿಳಿದು ಬಂದಿದ್ದು, ಈತ ನರ್ಸ್‌ ಒಬ್ಬಳನ್ನು ಬಳಸಿಕೊಂಡು ಹನಿಟ್ರ್ಯಾಪ್‌ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನೊಂದಿಗೆ ನರ್ಸ್‌ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಪ್ರಕಾಶ್‌ ಅದನ್ನೇ ಮುಂದಿಟ್ಟುಕೊಂಡು ನರ್ಸ್‌ಳನ್ನು ಬಲವಂತವಾಗಿ ಹಲವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿದ್ದ. ಅದನ್ನೂ ಚಿತ್ರೀಕರಿಸಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ವೆುಲ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವರಿಂದ ಲೈಂಗಿಕ ಶೋಷಣೆಗೊಳಗಾದ ನರ್ಸ್‌ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬಯಲಿಗೆ ಬಂದಿದೆ. ಪ್ರಕಾಶ್‌ ನಿಂದ ಹಲವು ಗಣ್ಯರು,ಸಿರಿವಂತರು ವಂಚನೆಗೊಳಗಾಗಿದ್ದಾರೆ ಎಂದು ಹೇಳಲಾಗಿದೆ.

Comments are closed.