ತಿರುಪತಿ: ಜಗತ್ತಿನ ಶ್ರೀಮಂತರ ದೇವರು ತಿರುಪತಿ ವೆಂಕಟೇಶ್ವರನ ಹುಂಡಿಗೆ 2016ರಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಚಿನ್ನ ರೂಪದ ಕಾಣಿಕೆ, ದೇಣಿಗೆ ಹರಿದುಬಂದಿದೆ.
2016ರಲ್ಲಿ ಸುಮಾರು 2.6 ಕೋಟಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇನ್ನು ತಿರುಪತಿ ಹುಂಡಿಗೆ ಕಳೆದ ವರ್ಷ ಸುಮಾರು 1018 ಕೋಟಿ ರುಪಾಯಿ ನಗದು ರೂಪದ ಕಾಣಿಕೆ ಹರಿದು ಬಂದಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ತಿಳಿಸಿದೆ.
67.12 ಲಕ್ಷ ಭಕ್ತರು ತಲಾ 300 ರುಪಾಯಿ ನೀಡಿ ಆನ್ ಲೈನ್ ಮೂಲಕ ದರ್ಶನದ ಟಿಕೆಟ್ ಖರೀದಿಸಿದ್ದಾರೆ. ಈ ಮೂಲಕ 201 ಕೋಟಿ ರುಪಾಯಿ ಹೆಚ್ಚುವರಿ ಆದಾಯ ದೊರೆತಿದೆ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಡಿ ಸಾಂಬಶಿವರಾವ್ ತಿಳಿಸಿದ್ದಾರೆ.
ಕಳೆದ ವರ್ಷ ಸುಮಾರು 10 ಕೋಟಿ ಲಾಡು ಪ್ರಸಾದ ತಯಾರಿಸಿದ್ದು 10 ಕೋಟಿ ಲಾಡು ತಯಾರಿಸಿದ್ದು ದಾಖಲೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ
Comments are closed.