ನವದೆಹಲಿ: ಸಾಕು ಪೋಷಕರು ತಾವು ದತ್ತು ತೆಗೆದು ಕೊಂಡ ಮಕ್ಕಳ ಮೇಲೆ ಕಾನೂನು ರೀತಿ ಸಂಬಂಧವನ್ನು ಹೊಂದಬಹುದು ಎಂದು ಹೊಸ ನಿಯಮ ತಿಳಿಸಿದೆ.
ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿಯ ಹೊಸ ನಿಯಮ ಜನವರಿ 16 ರಿಂದ ಅನ್ವಯ ಆಗಲಿದೆ. ಈ ನಿಯಮದ ಪ್ರಕಾರ ಸಂಬಂಧಿಕರ ಮಕ್ಕಳನ್ನು ಕೂಡ ದತ್ತು ತೆಗೆದುಕೊಳ್ಳಬಹುದಾಗಿದೆ.
ಇದುವರೆಗೆ ಭಾರತದ ಕಾನೂನಿನಲ್ಲಿ ಸಾಕು ಮಕ್ಕಳು ಮತ್ತು ಸಾಕು ಪೋಷಕರ ನಡುವೆ ಕಾನೂನು ಸಂಬಂಧ ಹೊಂದುವಂತ ನೀತಿ ನಿಯಮ ಇರಲಿಲ್ಲ, ಸಾಕು ಪೋಷಕರ ಆಸ್ತಿ ಮೇಲೆ ಸಾಕು ಮಕ್ಕಳಿಗೆ ಹಕ್ಕು ಇರಲಿಲ್ಲ, ಸಾಕು ಪೋಷಕರು ವಯಸ್ಸಾದ ಮೇಲೆ ತಮ್ಮ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಸಾಕು ಮಕ್ಕಳ ಮೇಲೆ ಅಧಿಕಾರ ಸ್ಥಾಪಿಸುವಂತಿರಲಿಲ್ಲ, ಆದರೆ ಹೊಸಕಾನೂನಿನ ಅನ್ವಯ ಈ ಎಲ್ಲಾ ಸೌಲಭ್ಯ ಪಡೆಯಬಹುದಾಗಿದೆ.
ಈ ಮೊದಲು ಅನಾಥ, ಪರಿತ್ಯಕ್ತ ಹಾಗೂ ಹೆತ್ತವರಿಂದ ದೂರಾಗಿ ಸಿಕ್ಕ ಮಕ್ಕಳನ್ನು ಮಾತ್ರ ದತ್ತು ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಈಗ ಹೊಸ ಕಾನೂನಿನ ಪ್ರಕಾರ ಸಂಬಂಧಿಕರ ಮಕ್ಕಳು, ಮದುವೆಗು ಮುನ್ನ ಸಂಗಾತಿ ಹೆತ್ತ ಮಕ್ಕಳನ್ನು ಸಹ ಈಗ ದತ್ತು ಪಡೆಯಬಹುದಾಗಿದೆ.
ದತ್ತು ತೆಗೆದು ಕೊಳ್ಳುವಾಗ ಮಕ್ಕಳ ಜೈವಿಕ ಪೋಷಕರಿಂದ ಅನುಮತಿ ಪಡೆಯಬೇಕು, ಒಂದು ವೇಳೆ ಅವರು ಜೀವಂತವಾಗಿಲ್ಲದಿದ್ದರೇ ಮಕ್ಕಳ ಕಲ್ಯಾಣ ಸಮಿತಿಯಿಂದ ಅನುಮತಿ ಪಡೆಯಬೇಕಾಗಿದೆ.
ಒಂದು ಮಗುವನ್ನು ದತ್ತು ತೆಗೆದುಕೊಂಡ ಕುಟುಂಬ ಅದೇ ಒಂದೇ ಲಿಂಗದ ಮಗುವನ್ನು ಮತ್ತೆ ತೆಗೆದುಕೊಳ್ಳಬಾರದು. ಅಂದರೆ ಈ ಮೊದಲು ಹೆಣ್ಣು ಮಗವನ್ನು ದತ್ತು ತೆಗೆದುಕೊಂಡರೇ ನಂತರ ದತ್ತು ತೆಗೆದುಕೊಳ್ಳುವ ಮಗು ಗಂಡಾಗಿರಬೇಕು. ಜೊತೆಗೆ ದತ್ತು ತೆಗೆದುಕೊಳ್ಳುವ ಮಗುವಿಗಿಂತ ಪೋಶಕರು 21 ವರ್ಷ ದೊಡ್ಡವರಾಗಿರಬೇಕು ಎಂಬ ನಿಯಮ ಮಾಡಲಾಗಿದೆ.
ಒಂದು ವೇಳೆ ತಾವು ದತ್ತು ತೆಗೆದುಕೊಂಡಿರುವ ಮಗುವನ್ನು ವಿದೇಶಕ್ಕೆ ಕರೆದುಕೊಂಡು ಹೋಗಬೇಕು ಎನ್ನುವುದಾದರೇ ಆ ದಂಪತಿ ನ್ಯಾಯಾಲಯದ ಅನುಮತಿ ಪಡೆಯಬೇಕಾಗಿದೆ.
ರಾಷ್ಟ್ರೀಯ
Comments are closed.