ಹಾಸನ(ಜ.17): ಹಾಸನದ ಹಿಮ್ಸ್ ಕಾಲೇಜಿನ ವೈದ್ಯರೊಬ್ಬರು ತಮ್ಮ ಸಂಸ್ಥೆಯ ಅಧಿಕೃತ ವಾಟ್ಸಾಪ್ ಗ್ರೂಪ್`ನಲ್ಲಿ ಅಶ್ಲೀಲ ದೃಶ್ಯವನ್ನು ಹರಿಬಿಟ್ಟಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ.
ಡಾ. ಸುರೇಶ್ ಎಡವಟ್ಟು ಮಾಡಿಕೊಂಡಿರುವ ವೈದ್ಯನಾಗಿದ್ದು, ಹಿಮ್ಸ್ ಸಂಸ್ಥೆಯೂ HIMSTA ಹೆಸರಿನಲ್ಲಿ ಅಫಿಷಿಯಲ್ ವಾಟ್ಸಾಟ್ ಗ್ರೂಪ್ ತೆರೆದಿದ್ದರು, ಈ ಗ್ರೂಪ್`ನಲ್ಲಿ ಮಹಿಳಾ ವೈದ್ಯರು, ಕಿರಿಯ ಮಹಿಳಾ ವೈದ್ಯರು ಸೇರಿದಂತೆ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು. ಅಂತಹ ಗ್ರೂಪ್ಗೆ ವೈದ್ಯ ಡಾ:ಸುರೇಶ್ ಅಶ್ಲೀಲ ದೃಶ್ಯ ಹರಿಬಿಟ್ಟಿದ್ದರು. ಈ ವಿಡಿಯೋ ನೋಡಿದ ಗ್ರೂಪ್`ನಲ್ಲಿದ್ದ ಮಹಿಳಾ ಸಹಾಯಕ ಪ್ರಾಧ್ಯಾಪಕರು ಹಿಮ್ಸ್ ನಿರ್ಧೇಶಕರಿಗೆ ದೂರು ನೀಡಿದ್ದರು, ದೂರಿನ ಹಿನ್ನೆಲೆ ಡಾ; ಸುರೇಶ್` ಗೆ ನೋಟೀಸ್ ಜಾರಿ ಮಾಡಿ ವಿವರಣೆ ಕೋರಿದ್ದಾರೆ. ವಿವರಣೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಿಮ್ಸ್ ನಿರ್ಧೇಶಕ ಡಾ:ರವಿಕುಮಾರ್ ತಿಳಿಸಿದ್ದಾರೆ.
ಕರ್ನಾಟಕ
Comments are closed.