ಕರಾವಳಿ

ಲೇಟೆಕ್ಸ್ ಹಾಲಿನಲ್ಲಿರುವ ಔಷಧಿಯ ಗುಣ

Pinterest LinkedIn Tumblr

 ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ. ಈ ಗಿಡದ ಬೇರು, ತೊಗಟೆ, ಎಲೆ, ಹೂ ಮತ್ತು ಅದರಲ್ಲಿರುವ ಲೇಟೆಕ್ಸ್ ಹಾಲನ್ನು ಔಷಧಿಗಳಿಗೆ ಬಳಸುತ್ತಾರೆ.

ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ. ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಪುಡಿಮಾಡಿದ ಒಣಗಿದ ಎಕ್ಕದ ತೊಗಟೆಯನ್ನು ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ. ಚೇಳುಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆಂದು ಕೇಳಿದ್ದೇನೆ. ಮುಖದಲ್ಲಿ ಬಂಗು, ಅಜೀರ್ಣ, ಮಹಿಳೆಯ ಋತುಚಕ್ರ ತೊಂದರೆಗಳಿಗೆ, ಗಾಯ, ಮೂಲವ್ಯಾದಿ, ಹಲ್ಲು ನೋವಿಗೆ ಹೀಗೆ ಅನೇಕ ತೊಂದರೆಗಳಿಗೆ ಎಕ್ಕದ ಹಲವು ಭಾಗಗಳನ್ನು ಔಷಧಿಯಾಗಿ ಬಳಸುತ್ತಾರೆ.

* ಎಕ್ಕದ ಹೂ 5 ತೊಲ, ತಿನ್ನುವ ಉಪ್ಪು 5 ತೊಲ ಈ ಎರಡನ್ನೂ ಶರಾವೆಯಲ್ಲಿಟ್ಟು ಸೀಲುಮಾಡಿ 10-15 ಕುಳ್ಳಿನಲ್ಲಿ ಪುಟವಿಟ್ಟರೆ ಭಸ್ಮವಾಗುತ್ತದೆ. ಇದೇ ಅರ್ಕಭಸ್ಮ. (ಇದನ್ನು ಬಾಂಡಲೆಯಲ್ಲಿ ಹಾಕಿ ಹುರಿದು ಭಸ್ಮ ಮಾಡುತ್ತಾರೆ). ಈ ಅರ್ಕ ಲವಣ 5 ಗುಂಜಿಯನ್ನು ನಿತ್ಯ ಬಿಸಿನೀರಿನಲ್ಲಿ 10 ನಿಮಿಷಕ್ಕೊಮ್ಮೆ 3 ಬಾರಿ ಕೊಟ್ಟರೆ ದಮ್ಮು ಪರಿಹಾರ. ಇದನ್ನೇ ದಿನಕ್ಕೆ 2 ಬಾರಿ 1-2 ಗುಂಜಿಯನ್ನು ಜೇನಿನಲ್ಲಿ ಅಥವಾ ತುಪ್ಪದಲ್ಲಿ ಸೇವಿಸಿದರೆ ಹಳೆಯ ದಮ್ಮು ಪರಿಹಾರ.

* ಜ್ವರ ಮತ್ತು ಕಫಯುಕ್ತ ಕೆಮ್ಮು ದಮ್ಮು: ಎಕ್ಕದ ಬೇರಿನ ತೊಗಟೆಯ ಚೂರ್ಣ, ಸಮಭಾಗ ಜೇಷ್ಠಮಧು ಚೂರ್ಣ ಸೇರಿಸಿಟ್ಟುಕೊಂಡು ಈ ಚೂರ್ಣ 8 ಗುಂಜಿಯನ್ನು ದಿನಕ್ಕೆ 2 ವೇಳೆ ಜೇನಿನಲ್ಲಿ 2-3 ವಾರ ಸೇವಿಸುವುದರಿಂದ ಉಬ್ಬಸ ಪರಿಹಾರವಾಗುತ್ತದೆ.

* ಎಕ್ಕದ ಎಲೆ ತಾನಾಗಿಯೇ ಹಣ್ಣಾಗಿ ಬಿದ್ದುದನ್ನು ನೆರಳಲ್ಲಿ ಒಣಗಿಸಿ ಸುಟ್ಟು ಬೂದಿಮಾಡಿ ವಯೋಮಾನಕ್ಕೆ ತಕ್ಕಂತೆ 2 ರಿಂದ 6 ಗುಂಜಿಯವರೆಗೆ ದಿನಕ್ಕೆರಡು ಬಾರಿ ಜೇನಿನಲ್ಲಿ ಕೊಡುತ್ತಿದ್ದರೆ ಅಪಸ್ಮಾರ ಪರಿಹಾರವಾಗುತ್ತದೆ.

* ಎಕ್ಕದ ಎಲೆಯನ್ನು ಬಿಸಿಮಾಡಿ ನೋವಿರುವ ಜಾಗಕ್ಕೆ ಶಾಖ ಕೊಡುತ್ತಿದ್ದರೆ ವಾಯುಶೂಲೆ ಪರಿಹಾರವಾಗುತ್ತದೆ.

Comments are closed.