ರಾಜಕೀಯ ಬಿಕ್ಕಟ್ಟು ಮಧ್ಯೆಯೇ ತಮಿಳುನಾಡಲ್ಲಿ ಹಾಡಹಗಲೇ ಮರ್ಡರ್ ನಡೆದಿದೆ. ಈ ಲೈವ್ ಮರ್ಡರ್ಗೆ ತಮಿಳುನಾಡು ಬೆಚ್ಚಿಬಿದ್ದಿದೆ. ತಿರುವಣ್ಣಾಮಲೈನಲ್ಲಿ ಎಐಎಡಿಎಂಕೆ ಸದಸ್ಯನ ಬರ್ಬರ ಹತ್ಯೆಯಾಗಿದೆ. ಎಸ್ ಕನಕರಾಜ್ ಎಂಬುವರನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಲಾಗಿದೆ. ಇತ್ತೀಚಿನವರೆಗೂ ತಿರುವಣ್ಣಾಮಲೈ ನ ಪಟ್ಟಣ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಕನಕರಾಜ್ ಹತ್ಯೆ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಬ್ಯಾಡ್ಮಿಂಟನ್ ಆಟ ಆಡಿ ವಾಪಸ್ಸಾಗುತ್ತಿದ್ದ ವೇಳೆ ಬೈಕಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿರುವವರು ಡಿಎಂಕೆ ಬೆಂಬಲಿಗರು ಎಂದು ಹೇಳಲಾಗುತ್ತಿದ್ದು, ಆರೋಪಿಗಳಾದ ಬಾಬು, ರಾಜಾ, ಸರವಣನ್, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತಿರುವಣ್ಣಾಮಲೈ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ರಾಷ್ಟ್ರೀಯ
Comments are closed.