ಕರ್ನಾಟಕ

ಹಣ ಡಬಲ್ ಆಸೆ: 110 ಕೋಟಿ ವಂಚನೆ!

Pinterest LinkedIn Tumblr


ಬೆಳಗಾವಿ (ಫೆ.12): ಹಣ ಡಬಲ್ ಮಾಡಿಕೊಡುತ್ತೆನೆ ಎಂದು ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲವು ನಗರ ಸೇವಕರಿಗೆ 110 ಕೋಟ್ಯಂತರ ರೂ ಟೋಪಿ ಹಾಕಲಾಗಿದೆ. ಭಟ್ಕಲ್ ಮೂಲದ ಝುಲ್ಫಿ ಖತೀಬ ಎಂಬಾತನೇ ಕೋಟಿ ರೂಗಳ ಪಂಗನಾಮ ಹಾಕಿದ ಆರೋಪಿ, ಇನ್ನು ಹಣ ಡಬಲ್ ಆಗುತ್ತೆ ಎಂಬ ಆಸೆಯಿಂದ ಅನೇಕ ರಿಯಲ್ ಎಸ್ಟೇಟ್ ಕುಳಗಳು, ನಗರ ಸೇವಕರು ಝುಲ್ಫಿ ಖತೀಬನನ್ನು ನಂಬಿ ಕೋಟ್ಯಾಂತರ ರೂಪಾಯಿಗಳನ್ನು ಇವನಿಗೆ ನೀಡಿದ್ದಾರೆ.
ಆದರೆ ಇವನು ಮಾತ್ರ ಹಣ ನೀಡದೇ ಮೋಸ ಮಾಡಿದ್ದಾನೆ ಮೋಸ ಹೋದವರು ಮಾತ್ರ ಈ ಅಸಾಮಿಯನ್ನ ಸುಮ್ಮನೆ ಬಿಟ್ಟಿಲ್ಲ. ಝುಲ್ಫಿಯನ್ನ ಹಿಡಿದು ಹಣ ಕೇಳಿದ್ದಾರೆ. ಹಣವನ್ನು ಅಸಾಮಿ ನೀಡದೆ ಇದ್ದಾಗ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ದೇಹದ ತುಂಬೆಲ್ಲ ಬರೆಹಾಕಿ, ಪಾದಗಳಿಗೆ ಲೈಟರ್’ನಿಂದ ಬರೆ ಎಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಮೋಸ ಹೋದವರು ಹಾಗೂ ಮೋಸಮಾಡಿದ ಝುಲ್ಫಿ ಖತೀಬ ಇದುವರೆಗೆ ಪೊಲೀಸರಿಗೆ ದೂರು ನೀಡಿಲ್ಲ. ಆದ್ರಿಂದ ಝುಲ್ಫಿ ಪ್ರಕರಣ ಇನ್ನುವರೆಗೆ ಗಾಳಿ ಸುದ್ದಿಯಾಗಿದೆ. ಇನ್ನಾದ್ರೂ ಬೆಳಗಾವಿ ಪೊಲೀಸರು ಈ ಝುಲ್ಪಿ ಯಾರು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೆ ಮಾತ್ರ ಎಲ್ಲದಕ್ಕೂ ಉತ್ತರ ಸಿಗುತ್ತದೆ.

Comments are closed.