ಮುಂಬೈ

500 ಕೆಜಿಯ ಈ ಮಹಿಳೆ ತಿಂಗಳಲ್ಲಿ ಎಷ್ಟು ಕೆಜಿ ತೂಕ ಇಳಿಸಿಕೊಳ್ಳುತ್ತಾಳೆ?

Pinterest LinkedIn Tumblr


ಮುಂಬೈ(ಫೆ.13): ವಿಶ್ವದ ಅತೀ ಹೆಚ್ಚು ತೂಕ 500 ಕೆಜಿಯಿರುವ ಈಜಿಪ್ಟಿನ ಮಹಿಳೆ ಇಮಾನ್ ಅಹಮದ್ ಅವರಿಗೆ ತೂಕ ಕಡಿಮೆ ಮಾಡಲು ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಡಾ. ಮುಫ್ಪಾಜಾಲ್ ಲಾಡಕವಾಲ್ ಅವರ ತಂಡ ಅತೀ ತೂಕದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಇನ್ನು 4 ವಾರಗಳಲ್ಲಿ 80 ರಿಂದ 100 ಕೆಜಿ ಕಡಿಮೆಯಾಗುವ ವಿಶ್ವಾಸ ಹೊಂದಿದೆ. 36 ವರ್ಷದ ಈ ಮಹಿಳೆ 2 ರೀತಿಯ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್, ತೀವ್ರ ಪ್ರತಿರೋಧಕ ಮತ್ತು ನಿರ್ಬಂಧಕ ಶ್ವಾಸಕೋಶದ ರೋಗ ಮತ್ತು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಈಕೆಯ ಚರ್ಮ ಅತೀ ಮಂದವಾಗಿದ್ದು, ಕೆಲವೊಂದು ಪ್ರಮುಖ ಚಿಕಿತ್ಸೆಗಳ ಮೂಲಕ ಆರಂಭಿಕ ಹಂತದಲ್ಲಿ 100 ಕೆಜಿಯಷ್ಟು ತೂಕ ಕಡಿಮೆ ಮಾಡಲು ಕನಿಷ್ಠ 4 ವಾರಗಳ ಅವಧಿ ಬೇಕಾಗುತ್ತದೆ. ಅಲ್ಲದೆ ಈಕೆಗಾಗಿಯೇ ವಿಶಾಲವಾದ ಕೊಠಡಿಯಲ್ಲಿ ಪ್ರತ್ಯೇಕ ಬೆಡ್, ಮಾನಿಟರ್’ಗಳು ವೆಂಟಿಲೇಟರ್ ಸೇರಿದಂತೆ ಶಶ್ತ್ರಚಿಕಿತ್ಸಾ ಪರಿಕರಗಳನ್ನು ಒದಗಿಸಲಾಗಿದೆ.
ಇಮಾನ್ ಆರೈಕೆಗಾಗಿ 8 ಮಹಿಳೆಯರ ತಂಡವನ್ನು ನಿಯೋಜಿಸಲಾಗಿದ್ದು, ಶಸ್ತ್ರ ಚಿಕಿತ್ಸೆಯ ನಂತರ 15 ಮಂದಿ ವೈದ್ಯರು ಈಕೆಯ ಆರೋಗ್ಯದ ಬಗ್ಗೆ ಗಮನವಿಡಲಿದ್ದಾರೆ. ಇಲ್ಲಿ ಶಸ್ತ್ರಚಿಕಿತ್ಸೆಯಾಗಿ ಈಜಿಪ್ಟಿಗೆ ತೆರಳಿದ ನಂತರವೂ ಅಲ್ಲಿನ ವೈದ್ಯರು ಆಕೆಯ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಜಾಗೃತಿ ವಹಿಸಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈಕೆ ಬಾಲಿವುಡ್ ನಟ ಸಲ್ಮಾನ್ ಖಾನ್’ನ ಅತೀ ದೊಡ್ಡ ಅಭಿಮಾನಿಯಾಗಿದ್ದು, ಆತನ ಸಿನಿಮಾಗಳನ್ನು ಅಮಿತಾಭ್ ಬಚ್ಚನ್ ಹಾಗೂ ಶಾರೂಖ್ ಖಾನ್ ಜೊತೆ ನೋಡಬೇಕೆಂಬ ಆಸೆ ಹೊಂದಿದ್ದಾಳೆ.

Comments are closed.