ಅಂತರಾಷ್ಟ್ರೀಯ

ಇಂಗ್ಲೆಂಡ್‌’ನ ರಾಣಿ ಎಲಿಜಬೆತ್‌ ಟ್ವಿಟರ್ ನಿರ್ವಹಣೆಗೆ ಹೊಸ ಡಿಜಿಟಲ್‌ ಸಂವಹನ ಅಧಿಕಾರಿ ಬೇಕಾಗಿದ್ದಾರೆ!

Pinterest LinkedIn Tumblr


ಲಂಡನ್‌(ಫೆ.13): ಇಂಗ್ಲೆಂಡ್‌’ನ ರಾಣಿ ಎಲಿಜಬೆತ್‌ ಅವರ ಟ್ವಿಟರ್‌ ಖಾತೆ ನಿರ್ವಹಿಸಲು ರೂ. 25 ಲಕ್ಷದ ವಾರ್ಷಿಕ ಪ್ಯಾಕೇಜ್‌ ಪ್ರಸ್ತಾಪ ಇರಿಸಲಾಗಿದೆ.
ಸುಮಾರು 2.77 ಮಿಲಿಯನ್‌ ಹಿಂಬಾಲಕರನ್ನು ಹೊಂದಿರುವ ಟ್ವಿಟರ್‌ ಖಾತೆ ನಿರ್ವಹಣೆಯ ಪ್ರಸ್ತಾಪ ಕುರಿತ ಜಾಹೀರಾತನ್ನು ಬಂಕಿಂಗ್‌’ಹ್ಯಾಮ್‌ ಅರಮನೆ ಪ್ರಕಟಿಸಿದೆ.
ರಾಣಿ ಎಲಿಜಬೆತ್‌ ಅವರ ಅಧಿಕೃತ ವೆಬ್‌’ಸೈಟ್‌’ನಲ್ಲಿ, ತ್ವರಿತವಾಗಿ ಸೃಜನಶೀಲ ತಂಡವನ್ನು ಮುನ್ನಡೆಸಲು ಹೊಸ ಡಿಜಿಟಲ್‌ ಸಂವಹನ ಅಧಿಕಾರಿ ಬೇಕಾಗಿದ್ದಾರೆ ಎಂದು ಪ್ರಕಟಿಸಲಾಗಿದೆ.
ರಾಣಿಯ ಕಾರ್ಯಕ್ರಮಗಳನ್ನು ಮತ್ತು ರಾಯಲ್‌ ಕುಟುಂಬದ ಸಾರ್ವಜನಿಕ ಪಾತ್ರಗಳ ಬಗ್ಗೆ ಜಗತ್ತಿಗೆ ತಿಳಿಯುವಂತೆ ಮಾಡುವುದಕ್ಕಾಗಿ, ಅವರ ಟ್ವಿಟರ್‌, ಫೇಸ್‌’ಬುಕ್‌, ಯೂಟ್ಯೂಬ್‌ ಮುಂತಾದ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ಪೂರ್ಣ ಪ್ರಮಾಣದ ಅಧಿಕಾರಿ ಬೇಕಾಗಿದ್ದಾರೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

Comments are closed.