ಈಗಾಗಲೆ ಉಚಿತ ಡಾಟಾ, ಕರೆಗಳಿಂದ ಶ್ರೀಸಾಮನ್ಯರ ಮನಸ್ಸಿನಲ್ಲಿ ಚಿರಮುದ್ರೆಯೊತ್ತಿರುವ ರಿಲಯನ್ಸ್ ಜಿಯೋ ಇದೀಗ ಇನ್ನೊಂದು ಸಂಚಲನ ಸೃಷ್ಟಿಸಲು ಹೊರಟಿದೆ. ಆರು ಅಂಕೆಯ ಮೊಬೈಲ್ ಸೀರೀಸ್ ಬಿಡುಗಡೆ ಮಾಡುವ ಮೂಲಕ ಮೊದಲ ಮೊಬೈಲ್ ನೆಟ್‌ವರ್ಕ್ ಆಗಿ ಅವತರಿಸಲಿದೆ.
ಈಗಾಗಲೆ ಉಳಿದ ದೂರಸಂಪರ್ಕ ಕಂಪೆನಿಗಳು 9, 8, 7 ಸೀರೀಸ್‌ನೊಂದಿಗೆ ಮೊದಲಾಗುವ ಫೋನ್ ನಂಬರ್‌ಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಮೊದಲ ಬಾರಿಗೆ ’6’ ಸೀರೀಸ್‌ನೊಂದೆಗೆ ಆರಂಭವಾಗುವ ಮೊಬೈಲ್ ನಂಬರ್‌ಗಳನ್ನು ಗ್ರಾಹಕರಿಗೆ ನೀಡಲಿದೆ.
ಈ ಮೇರೆಗೆ ದೂರಸಂಪರ್ಕ ಇಲಾಖೆ (ಡಾಟ್)ಯಿಂದ ಅನುಮತಿ ಪಡೆದಿದೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಅಸ್ಸಾಂ, ರಾಜಸ್ತಾನ, ತಮಿಳುನಾಡಿನಲ್ಲಿ ಮೊದಲ ಸೀರೀಸ್ ಫೋನ್‌ನಂಬರ್‌ಗಳನ್ನು ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಮಧ್ಯಪ್ರದೇಶ್, ಗುಜರಾತಿಗೆ 7 ಸೀರೀಸ್, ಕೋಲ್ಕತ್ತಾ, ಮಹಾರಾಷ್ಟ್ರಕ್ಕೆ 8 ಸೀರೀಸ್ ಎಂಎಸ್‍ಸಿ (ಮೊಬೈಲ್ ಸ್ವಿಚಿಂಗ್ ಕೋಡ್)ಯನ್ನು ಜಿಯೋಗೆ ಡಾಟ್ ನಿಗದಿಪಡಿಸಿದೆ.
ಇನ್ನೊಂದು ಕಡೆ ಜಿಯೋ ಗ್ರಾಹಕರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಲೇ ಇದೆ. ಡಿಸೆಂಬರ್ 31ಕ್ಕೆ ಬಳಕೆದಾರರ ಸಂಖ್ಯೆ 7.24 ಕೋಟಿಗೆ ತಲುಪಿದೆ. ಹೊಸದಾಗಿ ತೆಗೆದುಕೊಂಡ ಸೀರೀಸ್ ಮೂಲಕ ಮತ್ತಷ್ಟು ಸಂಖ್ಯೆಯ ಗ್ರಾಹಕರು ಆಕರ್ಷಿತರಾಗುವ ಸಾಧ್ಯತೆಗಳಿವೆ.
Comments are closed.