ಸಮಾಜವಾದಿ ಪಕ್ಷದ ಶಾಸಕ ಅರುಣ್ ವರ್ಮಾ ಸೇರಿ 8 ಮಂದಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ಆರೋಪ ಮಾಡಿದ್ದ ಮಹಿಳೆ ಸುಲ್ತಾನ್ ಪುರ ಬಳಿಯ ಹಳ್ಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಕುತ್ತಿಗೆ ಬಿಗಿದು ಕೊಂದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
2013ರ ಅತ್ಯಾಚಾರ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಶಾಸಕ ಅರುಣ್ ವರ್ಮಾ ಈಗ ಹತ್ಯೆ ಕೇಸ್`ನಲ್ಲಿ ಫಿಕ್ಸ್ ಆಗಿದ್ದಾರೆ.
ಯುವತಿಯ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಬಹಿರ್ದೆಸೆಗೆ ತೆರಳಿದ್ದ ವಾಪಸ್ ಬರಲಿಲ್ಲ ದು ದೂರಿನಲ್ಲಿ ತಿಳಿಸಿದ್ದರು. ಬಳಿಕ ಮೃತದೇಹ ಪತ್ತೆಯಾಗಿರುವ ಬಗ್ಗೆ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
Comments are closed.