ಕರಾವಳಿ

ಟೋಲ್ ಸಂಗ್ರಹ ವಿರುದ್ಧ ಮುಲ್ಕಿ-ಪಡುಬಿದ್ರೆಯಲ್ಲಿ ವ್ಯಾಪಕ ಪ್ರತಿಭಟನೆ : ಪೆ.25ರವರೆಗೆ ತಾತ್ಕಾಲಿಕ ರಿಯಾಯಿತಿ

Pinterest LinkedIn Tumblr

ಪಡುಬಿದ್ರಿ / ಮುಲ್ಕಿ, ಫೆಬ್ರವರಿ.14: ರಾಷ್ತ್ರೀಯ ಹೆದ್ದಾರಿ 66 ಹೆಜಮಾಡಿಯಲ್ಲಿ ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸದೇ ಟೋಲ್ ಸಂಗ್ರಹ ಆರಂಭಿಸಿರುವ ನವಯುಗ ಕಂಪೆನಿಯ ವಿರುದ್ಧ ತಿರುಗಿಬಿದ್ದಿರುವ ಸ್ಥಳೀಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಹೋರಾಟಗಾರರು ಸೋಮವಾರ ಉಡುಪಿ ಜಿಲ್ಲೆ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೂರಕವಾಗಿ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಹಾಗೂ ಹೆಜಮಾಡಿ ಬಳಿ ರಾಷ್ತ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಟನೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಸುಂಕ ವಸೂಲಿ ಆರಂಭಿಸಿರುವ ಹಿನ್ನೆಲೆಯಲ್ಲಿ ಕರೆ ನೀಡಲಾಗಿದ್ದ ಉಡುಪಿ ಜಿಲ್ಲಾ ಬಂದ್‌ ಯಶಸ್ಸನ್ನು ಕಂಡಿದ್ದು, ಫ‌ೆ. 25ರ ವರೆಗೆ ಸ್ಥಳೀಯರಿಗೆ ವಿನಾಯಿತಿ ನೀಡುವುದಾಗಿ ಪ್ರಕಟಿಸಿದ ಬಳಿಕ ಸೋಮವಾರ ಮಧ್ಯಾಹ್ನದ ವೇಳೆಗೆ ಹೆಜಮಾಡಿ ಟೋಲ್‌ಗೇಟ್‌ ವಿರುದ್ಧದ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಗಿದೆ.

ಬೆಳಗ್ಗಿನಿಂದಲೇ ರಾ. ಹೆ.66 ಹಾದುಹೋಗುವ ಕಾಪು, ಉಚ್ಚಿಲ, ಎರ್ಮಾಳು, ಪಡುಬಿದ್ರಿ ಹಾಗೂ ಹೆಜಮಾಡಿಗಳಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಕೆಲ ಸರಕಾರಿ ಬಸ್‌ಗಳು ಮಾತ್ರ ಮಂಗಳೂರು- ಉಡುಪಿ ಮಧ್ಯೆ ಸಂಚಾರ ನಡೆಸಿದವು. ಸಂಜೆ ವೇಳೆಗೆ ಉಡುಪಿ- ಮಂಗಳೂರು- ಕುಂದಾಪುರ ಹೆದ್ದಾರಿಯಲ್ಲಿ ಕೆಲ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದವು. ಶಿರ್ವ, ಮುದರಂಗಡಿ, ಕಾರ್ಕಳ ಭಾಗದಲ್ಲಿ ಎಂದಿನಂತಿತ್ತು. ಸಂಚಾರಕ್ಕೆ ಸಮಸ್ಯೆಯಾದ ಕಡೆಗಳಲ್ಲಿ ಶಾಲಾ, ಕಾಲೇಜಿಗೆ ರಜೆ ಸಾರಲಾಗಿತ್ತು.

ಬೆಳಗ್ಗೆ ಸುಮಾರು 9.15ರ ವೇಳೆಗೆ ಪ್ರತಿಭಟನಕಾರರು ಹೆಜಮಾಡಿ ಟೋಲ್‌ಗೇಟ್‌ ಹಾಗೂ ಪಡುಬಿದ್ರಿ ಪೇಟೆಗಳಲ್ಲಿ ಹೆದ್ದಾರಿ ತಡೆ ಮಾಡಿದರು. 10 ಗಂಟೆಯ ಸುಮಾರಿಗೆ ಪಡುಬಿದ್ರಿಯ ಮುಖ್ಯಪೇಟೆಯಲ್ಲಿ 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರು ಉಡುಪಿ ಜಿಲ್ಲಾಧಿಕಾರಿ, ಟೋಲ್‌ಗೇಟ್‌ಗಳ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದರು. ಮಹಿಳಾ ಪ್ರತಿಭಟನಕಾರರು ಹೋರಾಟದ ಬಗ್ಗೆ ಹೆಚ್ಚಿನ ದನಿ ಎತ್ತತೊಡಗಿದಾಗ ಅವರನ್ನು ಸುತ್ತುವರಿದ ಪೊಲೀಸರು ಉಡುಪಿ ಜಿಲ್ಲಾ ಎಡಿಶನಲ್‌ ಎಸ್ಪಿ ಎನ್‌. ವಿಷ್ಣುವರ್ಧನ್‌ ಆದೇಶದ ಮೇರೆಗೆ ಬಂಧಿಸತೊಡಗಿದಾಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.

ಮೂಲ್ಕಿಯಲ್ಲೂ ಪ್ರತಿಭಟನೆ :

ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಟೋಲಿನ ಪ್ರತಿಟನೆ ಕಾವೇರುತ್ತಿದ್ದಂತೆ ದ.ಕ. ಜಿಲ್ಲೆಯ ಗಡಿಪ್ರದೇಶವಾದ ಮೂಲ್ಕಿಯಲ್ಲೂ ಪ್ರತಿಟನೆ ಹಾಗೂ ಆಂಶಿಕ ಬಂದ್ ನಡೆಯಿತು. ಮಂಗಳೂರು ಉಡುಪಿ ತಡೆರಹಿತ ಬಸ್ಸುಗಳು ಹಾಗೂ ಕಿನ್ನಿಗೋಳಿ,ಕಟೀಲು ಹಳೆಯಂಗಡಿಗೆ ಹೋಗುವ ಬಸ್ಸುಗಳು ಸಂಪೂರ್ಣ ಸಂಚಾರ ನಿಲ್ಲಿಸಿದ್ದವು.ಅಂಗಡಿಮುಗ್ಗಟ್ಟುಗಳು ತೆರೆದಿದ್ದವು. ಬ್ಯಾಂಕುಗಳಲ್ಲಿ ವ್ಯವಹಾರ ಕಡಿಮೆಯಾಗಿತ್ತು.

ಬೆಳಿಗ್ಗೆ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಸುಮಾರು 15 ನಿಮಿಷಗಳ ಕಾಲ ಪ್ರತಿಟನಾಕಾರರರು ಹೆದ್ದಾರಿಯಲ್ಲಿ ಕುಳಿತು ವಾಹನ ಸಂಚಾರ ಸ್ತಗಿತಗೊಳಿಸಿ ಪ್ರತಿಟನೆ ಮಾಡಲಾಯಿತು.ಒಂದು ಹಂತದಲ್ಲಿ ಪ್ರತಿಟನಾಕಾರರು ಹೆದ್ದಾರಿಯನ್ನು ಬಿಟ್ಟು ಕದಲಲಲು ನಿರಾಕರಿಸಿದ್ದರಿಂದ ಪೊಲೀಸರು ಬಲವಂತವಾಗಿ ಪ್ರತಿಟನಾಕರರನ್ನು ಸ್ಥಳದಿಂದ ಎಬ್ಬಿಸಿದರು.ಮೂಲ್ಕಿಯ ರಿಕ್ಷಾ,ಕಾರು,ಬಸ್ಸು ಚಾಲಕ ಮಾಲಕರು ಪ್ರತಿಟನಾ ಸಬೆಯಲ್ಲಿ ಬಾಗವಹಿಸಿದ್ದರು.ಮೂಲ್ಕಿಯ ಕಾರು ಚಾಲಕ-ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ಮೂಲ್ಕಿ ನಗರ ಪಂಚಾಯತ್ ಸದಸ್ಯರುಗಳಾದ ಪುತ್ತು ಬಾವು,ಪುರುಷೋತ್ತಮ,ಬಶೀರ್ ಕುಳಾಯಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಅಶೋಕ್ ಪೂಜಾರ ಮತ್ತಿತರಿದ್ದರು.

ಮುಲ್ಕಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಟನಾಕಾರರನ್ನು ಉದ್ದೇಶಿಸಿ ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ರಾಷ್ತ್ರೀಯ ಹೆದ್ದಾರಿಯ ಗುತ್ತಿಗೆದಾರರು ದಕ್ಷಿಣಕನ್ನಡ ಜಿಲ್ಲೆಯ ಗಡಿಪ್ರದೇಶವಾದ ಮೂಲ್ಕಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸದೆ ಅಧಂಬರ್ಧ ಕಾಮಗಾರಿ ನಡೆಸಿ ಹೆಜಮಾಡಿಯಲ್ಲಿ ಹೆದ್ದಾರಿಯಲ್ಲಿ ಟೋಲ್ ಗೇಟ್ ಆರಂಭಿಸಿದ್ದಾರೆ.ಮೂಲ್ಕಿ ಪರಿಸರದ 20 ಕಿ.ಮಿ ವರೆಗೆ ಟೋಲ್ ಸಂಗ್ರಹದಲ್ಲಿ ವಾಹನಗಳಿಗೆ ವಿನಾಯಿತಿ ನೀಡಬೇಕು ಹಾಗೂ ಬಾಕಿಯುಳಿದ ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಟನೆ ನಡೆಸುವುದಾಗಿ ಹೇಳಿದರು.

ಮೂಲ್ಕಿಯಿಂದ ಕೇವಲ 2 ಕಿ ಮಿ ದೂರದಲ್ಲಿ ಹೆಜಮಾಡಿಯಲ್ಲಿ ಹಾಗೂ 10 ಕಿ ಮಿ ದೂರದಲ್ಲಿ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಆರಂಗೊಂಡಿದ್ದು ಇದರಿಂದ ಮೂಲ್ಕಿ ಪರಿಸರದವರಿಗೆ ತುಂಬಾ ತೊಂದರೆಯಾಗಿದೆ ಇದರಿಂದ ಮೂಲ್ಕಿ ಪರಿಸರದವರಿಗೆ ಟೋಲ್ ನಲ್ಲಿ ವಿನಾಯಿತಿ ನೀಡಬೇಕು ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಟನೆ ಮಾಡಲಾಗುವುದೆಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಹೇಳಿದರು.ಕಿನ್ನಿಗೋಳಿಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಸಬೆಯನ್ನುದ್ದೇಶಿಸಿ ಮಾತನಾಡಿದರು.

ಮೂಲ್ಕಿ ಪೋಲಿಸ್ ಠಾಣಾಧಿಕಾರಿ ಅನಂತ ಪದ್ಮನಾ ನೇತ್ರತ್ವದಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಎರ್ಪಡಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮೀಸಲು ಪೋಲಿಸ್ ಪಡೆಯು ಬೆಳಗ್ಗಿನಿಂದ ಬಂದೋ ಬಸ್ತ್ ಕಾರ್ಯದಲ್ಲಿ ಬಾಗಿಯಾಗಿತ್ತು. ಬಳಿಕ ಪ್ರತಿಟನಾಕಾರರು ಹೆಜಮಾಡಿ ಟೋಲ್ಗೆಟ್ ಬಳಿ ಮನವಿ ಸಲ್ಲಿಸಿದರು.

ಪೆ.25ರವರೆಗೆ ರಿಯಾಯಿತಿ

ಹೆಜಮಾಡಿ ಟೋಲಿನಿಂದ ಸುಮಾರು 5ಕಿಮೀರವರೆಗಿನ ವಾಹನಗಳಿಗೆ ಪೆ.25ರವರೆಗೆ ರೀಯಾಯಿತಿ ದೊರಕಿದೆ ಎಂದು ಹೋರಾಟಗಾರ ಧನಂಜಯಮಟ್ಟು ಹೇಳಿದ್ದಾರೆ. ಅವರು ಟೋಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮದ್ಯಮದವರಿಗೆ ತಿಳಿಸಿದ್ದಾರೆ.ಪೆ.25ರ ಬಳಿಕ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಟೋಲಿನ ಬಗ್ಗೆ ಸೂಕ್ತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Comments are closed.