ಕರಾವಳಿ

ಮೀನುಗಾರಿಕಾ ಬೋಟ್‌‌ಗೆ ಇನ್ನೊಂದು ಬೋಟ್ ಡಿಕ್ಕಿ ; ಆರು ಮಂದಿಯ ರಕ್ಷಣೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಫೆಬ್ರವರಿ.14: ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ ಬೋಟ್‌‌ಗೆ ಇನ್ನೊಂದು ಬೋಟ್ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮಂಜಾನೆ ಮಲ್ಪೆಯಿಂದ ಸುಮಾರು 21 ನಾಟಿಕಲ್ ದೂರದಲ್ಲಿ ಸಂಭವಿಸಿದೆ.

ಉಳ್ಳಾಲ ಅಕ್ಕರಕೆರೆಯ ರಿಯಾಝ್ ಅಹ್ಮದ್ ಎಂಬವರಿಗೆ ಸೇರಿದ ‘ಸೀ-ಪರ್ಲ್’ ಬೋಟ್ ಫೆ.10ರಂದು ಸಂಜೆ ಮೀನುಗಾರಿಕೆಗೆ ತೆರಳಿತ್ತು. ಮಂಗಳವಾರ ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ‘ಸೀ-ಪರ್ಲ್’ ಎಂಬ ಹೆಸರಿನ ಬೋಟ್‌ಗೆ ‘ಅಲ್-ರಮೀಝ್’ ಹೆಸರಿನ ಬೋಟ್ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ‘ಸೀ-ಪರ್ಲ್’ ಬೋಟ್‌‌ಗೆ ಭಾಗಶ: ಹಾನಿಯಾಗಿದೆ.ಈ ವೇಳೆ ಬೋಟ್‌ನಲ್ಲಿದ್ದ 6 ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೋಟ್ ಗಳ ಮಧ್ಯೆ ಢಿಕ್ಕಿ ಸಂಭವಿಸಿದ ಸಂದರ್ಭ ಅಪಾಯದ ಮುನ್ಸೂಚನೆ ಅರಿತ ‘ಅಲ್- ರಮೀಝ್’ ಬೋಟ್ನವರು ತಕ್ಷಣ ‘ಸೀ-ಪರ್ಲ್’ನ ಬೋಟ್ನವರನ್ನು ರಕ್ಷಿಸಿದರು. ಅಲ್ಲದೆ ಸುಮಾರು 1 ಗಂಟೆಗಳ ಕಾಲ ‘ಸೀ-ಪರ್ಲ್’ ಬೋಟನ್ನು ಎಳೆದು ಸಮುದ್ರದ ದಡ ಸೇರಿಸಲು ಪ್ರಯತ್ನಿಸಿದರು. ಆದರೆ ರೋಪ್ ತುಂಡಾದ ಪರಿಣಾಮ ಬೋಟನ್ನು ಎಳೆದು ದಡ ಸೇರುವ ಪ್ರಯತ್ನ ಕೈಗೂಡಲಿಲ್ಲ ಎನ್ನಲಾಗಿದೆ.

‘ಸೀ-ಪರ್ಲ್’ ಬೋಟ್ನಲ್ಲಿದ್ದ ಶಿರೂರಿನ ಅನ್ಸಾರ್, ಮುಹಮ್ಮದ್ ಗೌಸ್, ಹುಸೈನ್, ಉಮರ್, ಮುಜೀಬ್ ಹಾಗು ಕುಮಟಾದ ಬುದ್ದಿವಂತ ಎಂಬವರು ಇದೀಗ ಸುರಕ್ಷಿತವಾಗಿ ಮಂಗಳೂರು ದಕ್ಕೆ ಸೇರಿದ್ದಾರೆ. ಬೋಟ್ನಲ್ಲಿದ್ದ ಮೀನುಗಳು ಕೂಡ ಮತ್ತೆ ಸಮುದ್ರ ಪಾಲಾಗಿದೆ. ಈ ಘಟನೆಯಿಂದ ಸುಮಾರು 25 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Comments are closed.