ಮನೋರಂಜನೆ

ಅಡುಗೆ ಮನೆಯಲ್ಲಿ ಸಮಂತಾ ಮಾಡಿದ್ದೇನು, ಆಗಿದ್ದೇನು?

Pinterest LinkedIn Tumblr


ಟಾಲಿವುಡ್‌ ಕ್ಯೂಟ್‌ ಜೋಡಿ ಸಮಂತಾ-ನಾಗಚೈತನ್ಯ ಮದುವೆಯಾಗಿ ಈಗಷ್ಟೇ ಒಂದು ತಿಂಗಳು ಕಳೆದಿದೆ. ಇವರಿಬ್ಬರ ದಾಂಪತ್ಯ ಜೀವನ ಎಷ್ಟೊಂದು ಸುಂದರವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಇಲ್ಲೊಂದು ಸ್ವಾಧಿಷ್ಟ ಉದಾಹರಣೆ ಇಲ್ಲಿದೆ.

ನಾಗಚೈತನ್ಯಗಾಗಿ ರುಚಿಕರವಾದ ಸ್ಪೆಷಲ್‌ ಡಿಶ್‌ ಒಂದನ್ನು ತಯಾರಿಸಿ, ಅದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಚಿತ್ರದ ಶೂಟಿಂಗ್‌ ಕ್ಯಾನ್ಸಲ್‌ ಆದ ಹಿನ್ನೆಲೆಯಲ್ಲಿ ಸುಮ್ಮನೆ ಕೂರದ ಸಮಂತಾ, ಬಾಯಲ್ಲಿ ನೀರೂರಿಸುವ ಬಾಸಾ ಫಿಶ್‌ ಡಿಶ್‌ ತಯಾರಿಸಿದ್ದಾರೆ. ಸಮಂತಾ ಅಡುಗೆ ವಿಷಯದಲ್ಲಿ ಅಷ್ಟೊಂದು ಫರ್ಫೆಕ್ಟ್‌ ಇಲ್ಲದಿದ್ದರು ಪತಿಗಾಗಿ ಪ್ರೀತಿಯಿಂದ ತಯಾರಿಸಿರುವುದು ಮೆಚ್ಚಬೇಕಾದ ವಿಷಯ.

ಸಮಂತಾ ತಮ್ಮ ಕೈಯಾರೆ ಮಾಡಿದ ಬಾಸಾ ಮೀನಿನ ಅಡುಗೆಯನ್ನು ಸವಿದ ನಾಗಚೈತನ್ಯ, ಸೂಪರ್‌ ಆಗಿಯೇ ಪ್ರತಿಕ್ರಿಯಿಸಿರಬಹುದು. ಇನ್ನು ಈ ಮುದ್ದಾದ ದಂಪತಿ ಬರುವ ಡಿಸೆಂಬರ್‌ ತಿಂಗಳಿಗೆ ವಿದೇಶಕ್ಕೆ ಹಾರುವ ಸಾಧ್ಯತೆಯಿದೆ. ವಿದೇಶದಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷವನ್ನು ಆಚರಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತ ನಾಗಚೈತನ್ಯ ತಂದೆ ನಾಗಾರ್ಜುನ್‌ ಹೈದರಾಬಾದ್‌ನಲ್ಲಿ ಭರ್ಜರಿ ರಿಸೆಪ್ಶನ್‌ಗಾಗಿ ಸಿದ್ಧತೆ ನಡೆಸಿದ್ದಾರಂತೆ.

Comments are closed.