ಕರಾವಳಿ

ಹಿಂದೂ ಜನಜಾಗೃತಿ ಸಮಿತಿಯಿಂದ ‘ಪದ್ಮಾವತಿ ಚಲನಚಿತ್ರದ ವಿರುದ್ಧ ಸೆನ್ಸಾರ್ ಬೋರ್ಡ್‌ಗೆ ಮನವಿ

Pinterest LinkedIn Tumblr

From_left_Chandrakant_Bhadirke(HJS)_Satish_Kochrekar(HJS_Spokesperson)_Raju_vaidya(CBFC_officer)_Mrs_Nayana_bhagat(Santan_sanstha_Spokesperson)

 ‘ಪದ್ಮಾವತಿ ಚಲನಚಿತ್ರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ನಿಯೋಗವು ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆನ್ಸಾರ್ ಬೋರ್ಡ್) ಯ ಮುಖ್ಯ ಕಛೇರಿಗೆ ಮನವಿ ಸಲ್ಲಿಸಿದೆ.

‘ಪದ್ಮಾವತಿ ಚಲನಚಿತ್ರದ ವಿಷಯದಲ್ಲಿ ಸಮಾಜ ಭಾವನೆ ಅತ್ಯಂತ ತೀವ್ರವಾಗಿದೆ, ಈ ಚಲನಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಪ್ರಮಾಣಪತ್ರವನ್ನು ನೀಡುವ ಮುನ್ನ ಬನ್ಸಾಲಿಯವರನ್ನು ಹಿಂದೂ ಸಂಘಟನೆಯ ಪ್ರತಿನಿಧಿಗಳಿಗೆ ಈ ಚಲನಚಿತ್ರವನ್ನು ತೋರಿಸಲು ಹೇಳಿರಿ, ಅದೇ ರೀತಿ ಆಕ್ಷೇಪಣೆಗಳನ್ನು ಸ್ಪಷ್ಟಪಡಿಸಲು ತಿಳಿಸಿದ ನಂತರವೇ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಿರಿ ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಚಲನಚಿತ್ರ ಮಂಡಳಿಯ ವಿಭಾಗೀಯ ಅಧ್ಯಕ್ಷರಾದ ರಾಜೂ ವೈದ್ಯರವರು ‘ಇನ್ನೂ ನಮ್ಮ ಬಳಿ ಈ ಚಲನಚಿತ್ರದ ಬಂದಿಲ್ಲ. ಬಂದ ಬಳಿಕ ನಾವು ಈ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡುವ ಮುನ್ನ ಅದನ್ನು ಕಾಳಜಿಪೂರ್ವಕವಾಗಿ ನೋಡುವೆವು, ನಂತರವೇ ಅದಕ್ಕೆ ಪ್ರಮಾಣಪತ್ರವನ್ನು ನೀಡುವೆವು’ ಎಂದು ಆಶ್ವಾಸನೆ ನೀಡಿದರು.

ನಿಯೋಗದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಸೌ. ನಯನಾ ಭಗತ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರಕಾಂತ ಭದಿರ್ಕೆ ಮುಂತಾದವರು ಇದ್ದರು.

 ಮನವಿಯ ವಿವರಣೆ

ರಿಗೆ, ಮಾನ್ಯ ಅಧ್ಯಕ್ಷರು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ – ಮುಂಬೈ

ವಿಷಯ : ಮುಂಬರುವ ‘ಪದ್ಮಾವತಿ ಚಲನಚಿತ್ರದಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆಯುವ ತನಕ ಅದಕ್ಕೆ ಪ್ರಮಾಣಪತ್ರ ನೀಡಬೇಡಿರಿ ಇಲ್ಲದಿದ್ದರೆ ಅದರಿಂದ ಸಮಾಜವು ಪ್ರಕ್ಷುಬ್ಧವಾದರೆ ಅದಕ್ಕೆ ಸೆನ್ಸಾರ್ ಬೋರ್ಡ್ ನೇರ ಹೊಣೆ !

ಮಾನ್ಯರೇ,

ಸಂಜಯ ಲೀಲಾ ಬನ್ಸಾಲಿಯವರ ಮುಂಬರುವ ‘ಪದ್ಮಾವತಿ ಎಂಬ ಹಿಂದಿ ಚಲನಚಿತ್ರವು 1ಡಿಸೆಂಬರ್ 2017ರಂದು ಪ್ರದರ್ಶನ ಗೊಳ್ಳಲಿದೆ.

ಈ ಹಿಂದೆ ವಿವಾದಗಳಲ್ಲಿ ಸಿಲುಕಿದ್ದ ಹಲವಾರು ಚಲನಚಿತ್ರಗಳಂತೆ ಈ ಚಲನಚಿತ್ರದಲ್ಲಿಯೂ ಭಾರತೀಯ ಸಂಸ್ಕೃತಿ, ಪರಂಪರೆ, ಸಭ್ಯತೆ, ಆದರ್ಶ ಮಹಾಪುರುಷರು-ವೀರಾಂಗನೇಯರ ಅವಮಾನ, ಅದೇ ರೀತಿ ಹಿಂದೂಗಳ ಗೌರವಶಾಲಿ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಇಲ್ಲಿನ ತನಕ ಬಂದ ಟ್ರೇಲರ್‌ನಿಂದ ಕಂಡು ಬಂದಿದೆ.

ಈ ರೀತಿ ಮಾಡಿ ಬನ್ಸಾಲಿಯವರು ಕೋಟಿಗಟ್ಟಲೆ ಹಿಂದೂಗಳ ಭಾವನೆಗಳನ್ನು ನೋಯಿಸಿದ್ದಾರೆ. ಈ ಚಲನಚಿತ್ರದ ವಿಷಯದಲ್ಲಿ ವಿವಿಧ ಹಿಂದೂ ಸಂಘಟನೆಗಳು ಅನೇಕ ಆಕ್ಷೇಪಗಳನ್ನು ಎತ್ತಿದೆ. ಈ ಆಕ್ಷೇಪಗಳಿರುವುದರಿಂದ ಚಲನಚಿತ್ರ ಪ್ರಮಾಣೀಕರಣ ನೀಡುವಾಗ ಗಂಭೀರವಾಗಿ ವಿಚಾರ ಮಾಡಬೇಕು. ಈ ಚಲನಚಿತ್ರದಲ್ಲಿ ಯಾವುದೇ ಪ್ರಸಂಗದಿಂದ ಸಮಾಜ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವಾಗದಿರುವ ರೀತಿಯಲ್ಲಿ ಸೆನ್ಸಾರ್ ಬೋರ್ಡ್ ಕಾಳಜಿ ವಹಿಸಲಿ. ಈ ಚಲನಚಿತ್ರ ಹಾಗೂ ಬನ್ಸಾಲಿಯವರ ವಿಷಯದಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ನೀಡುತ್ತಿದ್ದೇವೆ.

1. ಪ್ರಾಚೀನ ಕಾಲದಲ್ಲಿ ಹಿಂದೂ ಪರಿವಾರದಲ್ಲಿನ ಕುಲಾಚಾರದ ಸ್ತ್ರೀಯರು ಸಮಾಜದ ಮುಂದೆ ನರ್ತಿಸುವುದಾಗಲಿ ಅಥವಾ ಹಾಡುವುದಾಗಲಿ ಮಾಡುತ್ತಿರಲಿಲ್ಲ, ಬದಲಾಗಿ ಪ್ರಸಂಗ ಬಂದಾಗ ಖಡ್ಗ ಹಿಡಿದು ಶತ್ರುಗಳು ನರ್ತಿಸುವಂತೆ ಮಾಡುವ ವೀರನಾರಿಯರಾಗಿದ್ದರು. ಇಂತಹ ಜ್ವಲಂತ ಹಾಗೂ ಪರಾಕ್ರಮಿ ಮಹಾನ್ ಇತಿಹಾಸದಲ್ಲಿ ಪರಿವರ್ತನೆ ಮಾಡಿ ಸಂಜಯ ಲೀಲಾ ಬನ್ಸಾಲಿಯು ‘ಪದ್ಮಾವತಿ ಚಲನಚಿತ್ರದಲ್ಲಿ ‘ಘೂಮರ್ ಹಾಡಿನಲ್ಲಿ ಮಹಾರಾಣಿ ಪದ್ಮಾವತಿಯು ನರ್ತಿಸುತ್ತಿರುವುದನ್ನು ತೋರಿಸಲಾಗಿದೆ. ಇದು ರಾಣಿ ಪದ್ಮಾವತಿಗೆ ಘೋರ ಅಪಮಾನವಾಗಿದೆ. ಇದರಿಂದ ರಾಜಪೂತ ಸಮಾಜವು ಸೇರಿದಂತೆ ಸಂಪೂರ್ಣ ಹಿಂದೂ ಸಮಾಜದ ಭಾವನೆ ಆಕ್ರೋಶಪೂರ್ಣವಾಗಿದೆ.

2. ಬನ್ಸಾಲಿಯವರು ಈ ಹಿಂದೆಯೂ ‘ಬಾಜೀರಾವ್-ಮಸ್ತಾನಿ ಚಲನಚಿತ್ರದಲ್ಲಿ ಬಾಜೀರಾವ್ ಪೇಶ್ವೆಯವರ ಪತ್ನಿ ಕಾಶೀಬಾಯಿ ನರ್ತಿಸುವಂತೆ ತೋರಿಸಿದ್ದಾರೆ. ರಾಣಿ ಪದ್ಮಾವತಿ ಅಥವಾ ಕಾಶೀಬಾಯಿಯವರ ಇತಿಹಾಸದ ಬಗ್ಗೆ ಇರುವ ಯಾವುದೇ ಗ್ರಂಥದಲ್ಲಿ ‘ಅವರು ನರ್ತಿಸುತ್ತಿದ್ದರು ಎಂಬ ಉಲ್ಲೇಖ ಅಥವಾ ಸಾಕ್ಷ್ಯಗಳಿಲ್ಲದಿರುವಾಗ ಕಾಲ್ಪನಿಕ ಕಥೆ ಕಟ್ಟಿ ಪ್ರತ್ಯಕ್ಷವಾಗಿ ಇತಿಹಾಸದಲ್ಲಿ ಪರಿವರ್ತನೆ ಮಾಡುವುದು ಇದು ಅಯೋಗ್ಯವೇ ಸರಿ.

3. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಕಲಾ ಸ್ವಾತಂತ್ರ್ಯವು ಚಲನಚಿತ್ರ ನಿರ್ಮಾಪಕರಿಗೆ ಇತಿಹಾಸದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ. ಆ ರೀತಿ ಮಾಡಿದರೆ ಅದು ಸಂವಿಧಾನಾತ್ಮಕ ಅಧಿಕಾರದ ದುರುಪಯೋಗ ಹಾಗೂ ಭಾ.ದ.ಸಂ. ಕಲಂ ‘೨೯೫ ಅ’ ಗನುಸಾರ ಶಿಕ್ಷಾರ್ಹ ಅಪರಾಧವಾಗಿದೆ.

4. ಕಲೆಯ ಸ್ವಾತಂತ್ರ್ಯಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಇತಿಹಾಸಕ್ಕೂ ಇದೆ. ಅಷ್ಟೇ ಮಹತ್ವ ಮನಸ್ಸಿನಲ್ಲಿ ಮೂಡಿರುವ ಮೂರ್ತರೂಪಕ್ಕೆ, ಶ್ರದ್ಧೆಗೆ, ಗೌರವಕ್ಕೆ ಇರುತ್ತದೆ, ಎಂಬುದನ್ನು ಬನ್ಸಾಲಿ ಹಾಗೂ ಕಲೆಯ ಸ್ವಾತಂತ್ರ್ಯವನ್ನು ಪರುಸ್ಕರಿಸುವವರು ಗಮನದಲ್ಲಿಡಬೇಕು.

5. ‘ಘೂಮರ್ ನೃತ್ಯ ರಾಜಸ್ಥಾನಿ ಸಂಸ್ಕೃತಿಯ ಒಂದು ನೃತ್ಯವಿಧವಾಗಿದ್ದು ಆ ನೃತ್ಯವನ್ನು ಒಂದು ವಿಶಿಷ್ಟ ಸಮಾಜವು ಮಾಡುತ್ತದೆ. ಈ ನೃತ್ಯವನ್ನು ಯಾವುದೇ ರಾಜಕನ್ಯೆ ಅಥವಾ ರಾಣಿ ಮಾಡುತ್ತಿರಲಿಲ್ಲ, ಎಂಬುದನ್ನು ಇತಿಹಾಸದ ಆಧಾರದಲ್ಲಿ ಚಲನಚಿತ್ರವನ್ನು ನಿರ್ಮಿಸುವ ಬನ್ಸಾಲಿಯು ಅಧ್ಯಯನ ಮಾಡಬೇಕಾಗಿತ್ತು ಅಥವಾ ಸ್ವಲ್ಪದರಲ್ಲಿ ಅದರ ಅಧ್ಯಯನ ಮಾಡಿಯೂ ಬೇಕಂತಲೇ ಮಸಾಲೆಯಿರುವ ಚಲನಚಿತ್ರವನ್ನು ತಯಾರಿಸುವ ನಿಟ್ಟಿನಲ್ಲಿ ಆ ರೀತಿ ಮಾಡಿದ್ದಾರೆ, ಎಂಬುದರಲ್ಲಿ ಅನುಮಾನವೇ ಇಲ್ಲ.

6. ಯಾವ ರಾಣಿ ಪದ್ಮಾವತಿಯು ತನ್ನ ಶೀಲರಕ್ಷಣೆಗಾಗಿ ‘ಜೋಹಾರ್ (ಜೀವಂತವಾಗಿರುವಾಗ ಅಗ್ನಿಪ್ರವೇಶ ಮಾಡುವುದು) ಮಾಡಿದರೋ,  ಅಂತಹ ಸತ್ಶೀಲ ರಾಣಿಯು ಎಲ್ಲರ ಎದುರಿಗೆ ನರ್ತಿಸುತ್ತಿರುವಂತೆ ತೋರಿಸುವುದು, ಇದು ರಾಣಿ ಪದ್ಮಾವತಿಗೆ ಘೋರ ಅವಮಾನವಾಗಿದೆ. ಆದ್ದರಿಂದ ರಾಣಿ ಪದ್ಮಾವತಿಯು ನರ್ತಿಸಿರುವ ಕಾಲ್ಪನಿಕ ಹಾಡನ್ನು ಚಲನಚಿತ್ರದಿಂದ ತೆಗೆದು ಹಾಕಲಿ, ಎಂಬುದು ಹಿಂದೂ ಜನಜಾಗೃತಿ ಸಮತಿಯ ಬೇಡಿಕೆಯಾಗಿದೆ.

7. ಈ ರೀತಿ ಚಲನಚಿತ್ರದಲ್ಲಿ ನೀಡಿರುವ ಪ್ರಸಂಗಗಳು ಸಣ್ಣ ಮಕ್ಕಳ ಮುಗ್ಧ ಮನಸ್ಸಿನಲ್ಲಿ ಅಚ್ಚುಂಟು ಮಾಡುತ್ತದೆ, ಆದ್ದರಿಂದ ಭಾವಿ ಪೀಳಿಗೆಯು ರಾಣಿ ಪದ್ಮಾವತಿ ಕೂಡ ಆ ರೀತಿ ನರ್ತಿಸುತ್ತಿದ್ದರು, ಎಂದು ನೆನಪಿಟ್ಟುಕೊಳ್ಳುವುದು. ಆ ರೀತಿಯಾದರೆ ನಾವು ಭಾವೀ ಪೀಳಿಗೆಯ ಮೇಲೆ ತಪ್ಪು ಸಂಸ್ಕಾರವನ್ನು ಮಾಡುತ್ತಿರುತ್ತೇವೆ.

8. ಕೆಲವು ಸಂಘಟನೆಗಳು ರಾಣಿ ಪದ್ಮಾವತಿ ಹಾಗೂ ಅಲ್ಲಾಉದ್ದೀನ್ ಖಿಲ್ಜಿಯ ನಡುವೆ ಕಾಲ್ಪನಿಕ ಪ್ರಸಂಗಗಳನ್ನು ತೋರಿಸಲಾಗಿದೆ ಎಂದು ಕೂಡ ಆಕ್ಷೇಪ ಮಾಡಿದ್ದಾರೆ. ಆ ವಿಷಯದಲ್ಲಿ ಸ್ವತಃ ಬನ್ಸಾಲಿಯವರು ಇತ್ತೀಚೆಗಷ್ಟೇ ಒಂದು ವೀಡಿಯೋವನ್ನು ಮಾಡಿ ‘ನಾನು ಪದ್ಮಾವತಿಯಿಂದ ಪ್ರೇರಣೆ ಪಡೆದುಕೊಂಡಿದ್ದೇನೆ, ನನ್ನ ಈ ಚಲನಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯವಿಲ್ಲ. ಅದು ಕೇವಲ ವದಂತಿಯಷ್ಟೇ ಎಂದು ಹೇಳಿದ್ದಾರೆ.

ಇದೇನಾದರೂ ಸತ್ಯವಾಗಿದ್ದರೆ ಬನ್ಸಾಲಿಯವರು ಮೊದಲು ಚಲನಚಿತ್ರವನ್ನು ಹಿಂದೂ ಸಂಘಟನೆಗಳ ಪ್ರತಿನಿಧಿಗಳಿಗೆ ತೋರಿಸುವುದು ಹಾಗೂ ಅವರ ಅನುಮಾನಗಳನ್ನು ದೂರ ಮಾಡುವುದು ಸುಲಭ ಪರ್ಯಾಯವಾಗಿದೆ. ಇದರಲ್ಲಿ ಸೆನ್ಸಾರ್ ಬೋರ್ಡ್ ಕೂಡ ಹಸ್ತಕ್ಷೇಪವೆತ್ತಲಿ, ಆ ರೀತಿ ಮಾಡದೆ ಹೋದರೆ ಚಲನಚಿತ್ರಕ್ಕೆ ಅನುಮತಿ ನೀಡುವುದಿಲ್ಲ, ಎಂಬ ರೀತಿಯ ಭೂಮಿಕೆ ತೆಗೆದುಕೊಳ್ಳಲಿ. ಬನ್ಸಾಲಿಯವರು ಆ ರೀತಿ ಮಾಡದಿದ್ದರೆ ಸೆನ್ಸಾರ್ ಬೋರ್ಡ್ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡುವುದು ಬೇಡ.

9. ಕರನೀ ಸೇನಾ ಹಾಗೂ ವಿವಿಧ ರಾಜಪುತ ಸಂಘಟನೆಗಳು ‘ಈ ಚಲನಚಿತ್ರವು ಯಾವ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವುದೋ, ಆ ಚಲನಚಿತ್ರದ ಮಾಲೀಕರೇ ಅದಕ್ಕೆ ಹೊಣೆಯಾಗುವರು’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಈ ಚಿತ್ರದ ಬಗ್ಗೆ ಸಮಾಜಭಾವನೆ ಎಷ್ಟು ಗಂಭೀರವಾಗಿದೆ, ಎಂಬುದು ತಿಳಿದು ಬರುತ್ತದೆ. ಆದರೂ ಕಾನೂನು ಹಾಗೂ ಸುವ್ಯವಸ್ಥೆಗೆ ತೊಂದರೆಯಾಗದಿರಲಿ ಹಾಗೂ ಯಾವುದೇ ಸಮಾಜಘಟಕದ ಭಾವನೆಗೆ ನೋವಾಗದಿರಲಿ ಎಂಬ ನಿಲುವಿನಿಂದ ಸೆನ್ಸಾರ್ ಬೋರ್ಡ್ ಅತ್ಯಂತ ಜವಾಬ್ದಾರಿ ವಹಿಸಿ ಮೇಲಿನ ಸೂಚನೆಗಳ ಬಗ್ಗೆ ವಿಚಾರ ಮಾಡಿ ಈ ಚಲನಚಿತ್ರದಲ್ಲಿನ ಆಕ್ಷೇಪಣೆಗಳನ್ನು ಸ್ಪಷ್ಟಪಡಿಸಲಿ.

ಒಂದು ವೇಳೆ ಈ ಆಕ್ಷೇಪಣೆಗಳಿಗೆ ಸ್ಪಷ್ಟೀಕರಣ ನೀಡದೆ ಈ ಚಲನಚಿತ್ರವು ಪ್ರದರ್ಶನಗೊಂಡರೆ ಹಾಗೂ ಇದರಿಂದ ಸಮಾಜವು ಸಹನೆ ಕಳೆದುಕೊಂಡರೆ ಅದಕ್ಕೆ ಸೆನ್ಸಾರ್ ಬೋರ್ಡ್ ಕೂಡ ಹೊಣೆ.

ತಮ್ಮ ವಿಶ್ವಾಸಿ,
ಶ್ರೀ. ಸತೀಶ ಕೊಚರೇಕರ
ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ : 7204082609

Comments are closed.