ಉಳ್ಳಾಲ: ದೇಶಕ್ಕಾಗಿ ಗಾಂಧಿ ಕುಟುಂಬದ ಸೇವೆ ಅಪಾರವಾಗಿದ್ದು, ಪ್ರಥಮ ಪ್ರಧಾನಿ ಪ್ರಧಾನಿ ಜವಾಹಾರ್ ಲಾಲ್ ನೆಹರೂ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಆಗುತ್ತಿದೆ ಎಂದು ಮಂಗಳೂರು ತಾ.ಪಂ ಅಧ್ಯಕ್ಷ ಮೊಹಮ್ಮದ್ ಮೋನು ಹೇಳಿದ್ದಾರೆ.
ಅವರು ಮಂಜನಾಡಿ ಗ್ರಾಮದ ಕಲ್ಕಟ್ಟ ದ.ಕ.ಜಿ ಪಂಚಯಾತ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಜಂಟಿ ಅಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆಹರೂರವರ ಸಂದೇಶ ಮಕ್ಕಳಿಗೆ ಆದರ್ಶವಾಗಿದೆ. 80 ವರ್ಷಗಳ ಇತಿಹಾಸವಿರುವ ಶಾಲೆಯನ್ನು ಇನ್ನಷ್ಟು ಕಟ್ಟಿ ಬೆಳೆಸುವ ಕಾರ್ಯ ಎಸ್ ಡಿಎಂಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಆಗಬೇಕಿದೆ ಎಂದ ಅವರು ಎಂಸಿಎಫ್ ನವರು ಮಂಜನಾಡಿ ಶಾಲೆಗೆ ನೀಡಿರುವ ಕೊಡುಗೆಯನ್ನು ತಾಲೂಕು ಪಂಚಾಯತ್ ಅಭಿನಂಧಿಸುತ್ತದೆ. ಸರಕಾರ ಮಾಡದ ಕೆಲಸವನ್ನು ಎಂಸಿಎಫ್ ಮಾಡಿ ತೋರಿಸಿದೆ ಎಂದರು.
ಶಿಕ್ಷಣಾಧಿಕಾರಿ ಜ್ಞಾನೇಶ್ ಮುಖ್ಯ ಅತಿಥಿಯಗಿ ಭಾಗವಹಿಸಿ ಮಾತನಾಡಿ, ಶಾಲೆ ಇದುವರೆಗೂ ಸರಕಾರದ ಹೆಸರಲ್ಲಿರಲಿಲ್ಲ. ಸದ್ಯ ಶಾಲೆಯ ಜಾಗ ಸರಕಾರದ ಅಧೀನಕ್ಕೆ ಬಂದಿದ್ದು, ಮುಂದೆ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಸಿಗುವ ಅನುದಾನವನ್ನು ಒದಗಿಸುವ ಭರವಸೆಯನ್ನು ನೀಡಿದರು. ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮೊಹಮ್ಮದ್ ಅಸೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಗುರುನಾಥ್ ಬಾಗೇಲಾಡಿ, ಎಂಸಿಎಫ್ ನಿರ್ದೇಶಕ ಕೆ.ಪ್ರಭಾಕರ್, ಎಂಸಿಎಫ್‌ನ ವ್ಯವಸ್ಥಪಕ ಪಿ ಸುರೇಶ್, ಪಿ.ಜೆ ರೈ, ಮಂಜನಾಡಿ ಗ್ರಾ.ಪಂ ಸದಸ್ಯರಾದ ಅಬ್ದುಲ್ ಖಾದರ್, ಕೆ.ಪಿ ಅಶ್ರಫ್, ಅನಿತಾ ಫೇರಾವೂ, ಶೋಭಾ, ಇಸ್ಮಾಯಿಲ್, ಮಾಲತಿ, ಕೌಸರ್ ಬಾನು, ಸೀತಾ ನಾಯಕ್, ಶಮೀಮಾ, ಪ್ರೇಮ, ಲತೀಫ್, ನಿವೃತ್ತ ಅಧ್ಯಾಪಕ ಸುಬ್ರಹ್ಮಣ್ಯ ಭಟ್, ಶಾಲಾ ಅಭಿವೃಧ್ಧಿ ಸಮಿತಿ ಅಧ್ಯಕ್ಷ ಕೆ.ಬಿ ಮುಹಮ್ಮದ್, ಸದಸ್ಯರಾದ ಕೆ.ಕೆ ಹಸೈನಾರ್, ಭಾಸ್ಕರ್ ಕಲ್ಕಟ್ಟ, ಉದ್ಯಮಿಗಳಾದವಲ್ಟ್ ಡಿಸೋಜಾ, ಮುಹಮ್ಮದ್ ಸಿದ್ದೀಕ್ ಗೋಲ್, ಅಬ್ದುಲ್ ಲತೀಫ್ ಕೈರಳಿ ಮುಂತಾದವರು ಉಪಸ್ಥಿತರಿದರು.
ಶಿಕ್ಷಕರಾದ ಭಾರತಿ, ಅಬ್ದುಲ್ ರಹ್ಮಾನ್, ಸವೀತಾ ಮಕ್ಕಳ ದಿನಾಚರಣೆ ಪ್ರಯುಕ್ತ ಅಯೋಜಿಸಿದ ಕ್ರೀಡೆಯಲ್ಲಿ ವಿಜೇತರ ಪಟ್ಟಿ ವಾಚಿಸಿದರು.
ಪ್ರೌಢಶಾಲಾ ಅಭಿವೃಧ್ಧಿ ಸಮಿತಿ ಅಧ್ಯಕ್ಷ ಎನ್.ಎಸ್ ಕರೀಂ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡಿ’ಸೋಜ ವಂದಿಸಿದರು. ಶಿಕ್ಷಕರಾದ ಶೈಲಾ ಭಟ್ ಮತ್ತು ಅನಂದ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಎನ್.ಸಿ.ಎಫ್ ಸಂಸ್ಥೆ ಕೊಡುಗೆಯಾಗಿ ನೀಡಿದ ಸುಮಾರು 2ಲಕ್ಷ ಅಂದಾಜುವಿನ ಶಾಲಾ ಪೀಠೋಪಕರಣಗಳುನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಮಕ್ಕಳ ದಿನಾಚರಣೆ ಪ್ರಯುಕ್ತ ಅಯೋಜಿಸಿದ ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Comments are closed.