ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ನಮ್ಮ ಸರಕಾರದ ಕೊನೆಯ ಅಧಿವೇಶನವಾಗಿದೆ. ಆದಾಗ್ಯೂ ಸಚಿವ ಶಾಸಕರು ಕಲಾಪಕ್ಕೆ ಗೈರು ಹಾಜರಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಕಲಾಪಕ್ಕೆ ಗೈರುಹಾಜರಾಗಲು ಏನು ಕಾರಣ? ನಿಮಗೆ ಆಗುತ್ತಿರುವ ತೊಂದರೆಯಾದರೂ ಏನು? ತೊಂದರೆಯನ್ನಾದರೂ ಹೇಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳಾಗಿ ಅಧಿವೇಶನ ನಡೆಯುತ್ತಿರುವ ಕಲಾಪಗಳಿಗೆ ಗೈರುಹಾಜರಾಗುವುದು ಸರಿಯಲ್ಲ. ವಿಪ್ ಜಾರಿಗೊಳಿಸಿದರೂ ಕೂಡಾ ಸದನಕ್ಕೆ ಹಾಜರಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ನಾಳೆಯಿಂದ ಕೂಡಲೇ ಎಲ್ಲಾ ಶಾಸಕರು, ಸಚಿವರು ಕಲಾಪಕ್ಕೆ ಹಾಜರಾಗಿ, ಸಚಿವ ಜಾರ್ಜ್ ಮತ್ತು ಮೂಢನಂಬಿಕೆ ವಿಧೇಯಕವನ್ನು ಬೆಂಬಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕಟ್ಟಾಜ್ಞೆ ಹೊರಡಿಸಿದ್ದಾರೆ
Comments are closed.