ಮನೋರಂಜನೆ

ಜನ್ಮ ದಿನದ ಸಂಭ್ರಮಾಚರಣೆಗಳಿಂದ ದೂರ ಉಳಿಯಲಿರುವ ಸೂಪರ್ ಸ್ಟಾರ್ ರಜನಿಕಾಂತ್ ! ಕಾರಣ….?

Pinterest LinkedIn Tumblr

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು 67ನೇ ಜನ್ಮ ದಿನದ ಸಂಭ್ರಮ. ಆದರೆ ಅಭಿಮಾನಿಗಳ ಪಾಲಿನ ಆರಾದ್ಯ ದೈವವಾದ ನಟ ರಜನಿಕಾಂತ್ ಈ ಬಾರಿ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.

ತಮಿಳುನಾಡಿಗೆ ಇತ್ತೀಚೆಗೆ ಅಪ್ಪಳಿಸಿದ ಓಖಿ ಚಂಡಮಾರುತದ ಕಾರಣ ಬಹಳಷ್ಟು ಹಾನಿಯಾಗಿದೆ. ಇದರಿಂದ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿನ ಈ ಕಠಿಣ ಸಂದರ್ಭದ ಕಾರಣ ನಟ ತಾನು ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.

ಕಳೆದ ಬಾರಿ ಚೆನ್ನೈ ಪ್ರವಾಹ ಹಾಗೂ ಜಯಲಲಿತಾ ಅವರ ಸಾವಿನ ಕಾರಣದಿಂದ ರಜನಿ ಹುಟ್ಟು ಹಬ್ಬ ಆಚರಣೆಯಿಂದ ದೂರ ಸರಿದಿದ್ದು ಈ ಬಾರಿ ಓಖಿ ಚಂಡಮಾರುತದ ಹಾವಳಿ ಕಾರಣ ಅಭಿಮಾನಿಗಳಿಗೆ ಮತ್ತೆ ನಿರಾಶೆಯುಂಟುಮಾಡಿದ್ದಾರೆ.

ರಜನಿಕಾಂತ್ ಸದ್ಯ ಶಂಕರ್ ಅವರ 2.0 ಹಾಗೂ ಪಾ ರಂಜಿತ್ ಅವರ ಕಾಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನುಮ ದಿನವಾದ ಇಂದು ರಜನಿ ಆಪ್ತೇಷ್ಟರ ಜತೆ ಕೆಲ ಸಮಯ ಕಳೆಯಲಿದ್ದಾರೆ.

Comments are closed.