ಪಣಜಿ: ಬ್ಯಾಂಕ್ ಅಥವಾ ಮೊಬೈಲ್ ಕಂಪನಿಗಳು ಮಾತ್ರ ನಿಮಗೆ ಆಧಾರ್ ಸಂಖ್ಯೆಯನ್ನು ನಮೂದಿಸಿ ಎಂದು ಪೀಡಿಸುತ್ತಿದ್ದಾರೆ ಎಂದು ಕೊಂಡಿದ್ದರೆ ತಪ್ಪು ಕಲ್ಪನೆ, ಏಕೆಂದರೆ ಗೋವಾದಲ್ಲಿ ಸೆಕ್ಸ್ ವರ್ಕರ್ಸ್ಗಳ ಪಿಂಪ್ಗಳು ಕೂಡಾ ಆಧಾರ್ ಕೇಳುತ್ತಿದ್ದಾರೆ.
ಹೌದು! ಇಲ್ಲಿ ವೇಶ್ಯಾವಾಟಿಕೆಗೂ ಆಧಾರ್ ಕಡ್ಡಾಯ ಎನ್ನುವುದನ್ನು ಇತ್ತೀಚೆಗೆ ಕೆಲ ದಿಲ್ಲಿ ಯುವಕರು ಬಹಿರಂಗ ಪಡಿಸಿದ್ದು, ಪೊಲೀಸರಿಗೆ ಸಿಕ್ಕಿ ಬೀಳದಿರಲು ಮಾಂಸದಂಧೆಯ ಮಧ್ಯವರ್ತಿಗಳು ಈ ಪ್ಲಾನ್ ಮಾಡಿದ್ದಾರೆ ಎಂದು ಯುವಕರು ಹೇಳಿದ್ದಾರೆ.
ನಾರ್ತ್ ಗೋವಾ ಬೀಚ್ಗೆ ಬ್ಯಾಚುಲರ್ ಪಾರ್ಟಿ ಮಾಡಲು ಬಂದಿದ್ದ ದಿಲ್ಲಿಯ ಐವರು ಯುವಕರ ತಂಡದ ಓರ್ವ ಸದಸ್ಯನಿಗೆ ಪಿಂಪ್ ಪರಿಚಯವಾಗಿದ್ದಾನೆ. ಇಲ್ಲೇ ಯುವಕರು ಬೀಚ್ ಬಳಿ ಹೋಟೆಲ್ ಬುಕ್ಕಿಂಗ್ ಮಾಡಿಕೊಂಡು, ಐವರು ಹುಡುಗಿಯರು ಬೇಕು ಅಂತಾ ವಿಚಾರಿಸಿದ್ದಾರೆ. ಇದಕ್ಕೊಪ್ಪಿದ ಮಧ್ಯವರ್ತಿ ಯುವತಿಯರನ್ನು ಪೂರೈಸುವುದಾಗಿ ಹೇಳಿದ್ದಾನೆ.
ಆದರೆ ಯುವಕರು ದಿಲ್ಲಿ ಮೂಲದವರು ಎಂದು ಹೇಳಿಕೊಂಡಾಗ ಮಧ್ಯವರ್ತಿಗೆ ಸಂಶಯ ಕಾಡಿ ಕೂಡಲೇ ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಫೋಟೋ ನೀಡುವಂತೆ ಕೇಳಿದ್ದಾನೆ. ಅಲ್ಲದೇ ಹೋಟೆಲ್ ರೂಮಿನ ಕೀಗಳ ಫೋಟೋ ಕೂಡ ಬೇಕೆಂದಿದ್ದಾನೆ. ಯುವಕರು ಇದಕ್ಕೊಪ್ಪಿ ತಮ್ಮ ಮಾಹಿತಿಯನ್ನು ರವಾನಿಸಿದ್ದಾರೆ.
ಇದಾದ ಕೆಲ ಕ್ಷಣಗಳಲ್ಲೇ ಅತ್ತ ಕಡೆಯಿಂದ ಹಿನ್ನಲೆ ಪರಿಶೀಲನೆ ಆರಂಭವಾಯಿತು, ಅಲ್ಲದೇ ಅವರು ತಂಗಿದ್ದ ಹೋಟೆಲ್ ಸುತ್ತಲೂ ಕೆಲ ಯುವಕರು ಪರಿಶೀಲನೆ ನಡೆಸಿದ್ದಾರೆ. ‘ಇಷ್ಟಾದರೂ ನಾವು ಕೇಳಿದಷ್ಟು ಯುವತಿಯರನ್ನು ಅವರು ಪೂರೈಸಿರಲಿಲ್ಲ ಎಂದು ಯುವಕರು ಹೇಳಿಕೊಂಡಿದ್ದಾರೆ.
ಗೋವಾದಲ್ಲಿ ಮಾಂಸದಂಧೆಗೆ ಬ್ರೇಕ್ ಹಾಕಲು ಪೊಲೀಸರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳು ಅಲರ್ಟ್ ಆಗಿದ್ದಾರೆ. ಹಾಗಾಗಿ ಗ್ರಾಹಕರ ವೇಷದಲ್ಲೇನಾದರೂ ಪೊಲೀಸರು ಬಂದಿದ್ದಾರಾ ಎನ್ನುವುದನ್ನು ಖಚಿತ ಪಡಿಸಲು ಪಿಂಪ್ಗಳು ಹಲವಾರು ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಅವರು ಒಂದು ಬಾರಿಗೆ 5-6 ಯುವತಿಯನ್ನು ಪೂರೈಸಲು ಒಪ್ಪುವುದಿಲ್ಲ. ಒಂದು ವೇಳೆ ಅವರು ಪೊಲೀಸರಿಗೆ ಸಿಕ್ಕಿಬಿದ್ದರೆ ಅಷ್ಟೂ ಜನರ ದಿನದ ಆಧಾಯಕ್ಕೆ ಪೆಟ್ಟು ಬೀಳುತ್ತದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Comments are closed.