ಕ್ರೀಡೆ

ವಿರಾಟ್-ಅನುಷ್ಕಾ ಮದುವೆ ರಹಸ್ಯವಾಗಿಟ್ಟಿದ್ದೇಕೆ? ರಹಸ್ಯ ಬಹಿರಂಗಪಡಿಸಿದ ಸಾನಿಯಾ

Pinterest LinkedIn Tumblr


ಕೋಲ್ಕತ್ತಾ: ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವರಿಸಿಕೊಂಡಿದ್ದರು.

ಆದರೆ ತಮ್ಮ ಮದುವೆ ವಿಚಾರವನ್ನು ವಿರುಷ್ಕಾ ಜೋಡಿಯು ಗೌಪ್ಯವಾಗಿಟ್ಟುಕೊಂಡಿದ್ದರು. ಯಾವುದೇ ಮಾಧ್ಯಮ ಊಹಾಪೋಹಗಳಿಗೆ ಎಡೆ ಮಾಡಿಕೊಡದ ಕೊಹ್ಲಿ-ಅನುಷ್ಕಾ ಜೋಡಿಯು ಕುಟುಂಬ ಸಮೇತ ಇಟಲಿಗೆ ಪ್ರಯಾಣಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಪ್ರಸ್ತುತ ವಿರಾಟ್-ಅನುಷ್ಕಾ ಜೋಡಿಗೆ ಶುಭ ಹಾರೈಸಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮದುವೆ ವಿಷಯವನ್ನು ಗೌಪ್ಯವಾಗಿಟ್ಟಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ.

ಇಲ್ಲಿ ಎಷ್ಟೊಂದು ಮೀಡಿಯಾ ಹೈಪ್ ಸೃಷ್ಟಿಯಾಗಲಿದೆ ಎಂಬುದನ್ನು ಅರಿತುಕೊಂಡು ಅವರು ಇಟಲಿಗೆ ಪ್ರಯಾಣಿಸಿರಬಹುದು ಎಂದು ಸ್ವತ: ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ವಿವಾಹಿತರಾಗುವ ಮೂಲಕ ಸಾಕಷ್ಟು ಮಾಧ್ಯಮ ಚರ್ಚೆಗೆ ಗುರಿಯಾಗಿರುವ ಸಾನಿಯಾ ವಿವರಿಸಿದರು.

ವಿವಾಹವೇ ಹೆಚ್ಚಿನ ಒತ್ತಡದಿಂದ ಕೂಡಿರುತ್ತದೆ ಎಂದಿರುವ ಸಾನಿಯಾ, ನಾನು ಮೀಡಿಯಾ ಹೈಪ್ ಪ್ರೋತ್ಸಾಹಿಸಲಾರೆ ಎಂದಿದ್ದಾರೆ. ಹಾಗೆಯೇ ಮಾಧ್ಯಮಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿತುಕೊಳ್ಳುವಂತೆ ವಿರುಷ್ಕಾಗೆ ಸಲಹೆ ಮಾಡಿದ್ದಾರೆ.

ವೈಯಕ್ತಿಕವಾಗಿ ನನಗೆ ಅವರನ್ನು ಹತ್ತಿರದಿಂದ ಗೊತ್ತು. ದೀರ್ಘ ಸಮಯದಿಂದ ಪರಸ್ಪರ ಪ್ರೀತಿಸಿದವರು ವಿವಾಹವಾಗಿರುವುದು ಉತ್ತಮ. ನಾನವರಿಗೆ ಶುಭ ಹಾರೈಸಲು ಬಯಸುತ್ತೇನೆ ಎಂದು ಸಾನಿಯಾ ಸೇರಿಸಿದರು.

Comments are closed.