ಉತ್ತರ ಪ್ರದೇಶದ ಬದೌನ್ ಪಟ್ಟಣದಲ್ಲಿ ನೆರೆಹೊರೆಯ ಇಬ್ಬರ ಜಗಳದಿಂದ ಬಡಪಾಯಿ ನಾಯಿಯೊಂದು ಜೈಲು ಕಂಬಿ ಎಣಿಸುತ್ತಿದೆ. ನೆರೆಹೊರೆಯವರ ಜಗಳಕ್ಕೆ ನಾಯಿಗೆ ಏಕೆ ಶಿಕ್ಷೆ ಎನ್ನುತ್ತಿದ್ದೀರಾ? ಇವರು ಜಗಳವಾಡಿದ್ದು ಆ ನಾಯಿಯ ಕಾರಣಕ್ಕೇ. ನಡೆದಿದ್ದು ಏನೆಂದರೆ, ಇಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ನಾಯಿ 2 ತಿಂಗಳುಗಳಿಂದ ನಾಪತ್ತೆಯಾಗಿತ್ತು.
ನಾಯಿಯನ್ನು ಹುಡುಕೀ ಹುಡುಕಿ ಕಂಗಾಲಾಗಿದ್ದ ಇವರಿಗೆ ಪಕ್ಕದ ಮನೆಯ ಟೆರೆಸ್ ಮೇಲೆ ತನ್ನ ನಾಯಿ ಕಂಡಿತು. ಇದು ನನ್ನದೇ ನಾಯಿ. ನನಗೆಹಿಂದಿರುಗಿಸಬೇಕು ಎಂದು ಪಕ್ಕದ ಮನೆಯವನ ಜೊತೆಜಗಳಕ್ಕೆ ನಿಂತರು. ಆದರೆ ಆತ ಈ ನಾಯಿ ನನ್ನದು, ನಾನು ಇದನ್ನು ದೀಪಾವಳಿ ದಿನ ಬರೇಲಿಯಿಂದ ತಂದೆ ಎಂದು ಪ್ರತಿವಾದ ಮಾಡಲಾರಂಭಿಸಿದ. ಈಗ ಇವರಿಬ್ಬರ ಜಗಳ ಪೊಲೀಸ್ ಠಾಣೆಗೆ ಬಂದು ನಿಂತಿದೆ.
ನಾಯಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಈ ಕುರಿತು ಸಂಪೂರ್ಣ ತನಿಖೆ ನಡೆಸಿ ನಿಜವಾದ ಮಾಲೀಕರಿಗೇ ನಾಯಿಯನ್ನು ಒಪ್ಪಿಸುತ್ತೇವೆ ಎಂದಿದ್ದಾರೆ.
-ಉದಯವಾಣಿ
Comments are closed.