ಭುವನೇಶ್ವರ: ವಿವಿಐಪಿಗಳು ಸೇರಿದಂತೆ ಇಲ್ಲಿನ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯ ಪ್ರವೇಶಿಸುವವರ ಮೇಲೆ ಒಡಿಶಾ ಸರಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ.
ನಿರ್ದಿಷ್ಟ ಪ್ರದೇಶದವರೆಗೆ ಮಾತ್ರವೇ ಭಕ್ತರಿಗೆ ಪ್ರವೇಶ ವಿದ್ದು, ಅದನ್ನು ಮೀರುವಂತಿಲ್ಲ. ಗಣ್ಯಾತಿ ಗಣ್ಯರಿಗೂ ಇದು ಅನ್ವಯವಾಗಲಿದೆ. ಅರ್ಚಕರನ್ನು ಬಿಟ್ಟರೆ ಬೇರೆ ಯಾರಿಗೂ ಗರ್ಭಗುಡಿಯ ಒಳಕ್ಕೆ ಹೋಗಲು ಅವಕಾಶ ವಿಲ್ಲ ಎಂದು ದೇವಾಲಯದ ಆಡಳಿತಕ್ಕೆ ಸರಕಾರ ಕಟ್ಟಪ್ಪಣೆ ಮಾಡಿದೆ.
-ಉದಯವಾಣಿ
Comments are closed.