ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ನಗರವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಬ್ರ್ಯಾಂಡ್ ಬೆಂಗಳೂರು ಸಾಗುತ್ತಿದ್ದು, ತನ್ನದೇ ಆದ ಲೋಗೊವನ್ನು ಪಡೆದುಕೊಂಡ ಭಾರತದ ಮೊದಲ ನಗರವಾಗಿ ಹೊರ ಹೊಮ್ಮಿದೆ.
ಬೆಂಗಳೂರಿಗೆ ‘ಬೆಂಗಳೂರು-ಬಿ ಯು’ ಟ್ಯಾಗ್‌ಲೈನ್ ಲಭಿಸಿದೆ. ಲೋಗೊ ಬೆಂಗಳೂರಿನ ಕಾಸ್ಮೊಪಾಲಿಟನ್ ಸಂಸ್ಕೃತಿಯ ಮಹತ್ವ, 480 ವರ್ಷಗಳ ಇತಿಹಾಸ, ಭವಿಷ್ಯದ ದೃಷ್ಟಿಕೋನಗಳೊಂದಿಗೆ ಕರ್ನಾಟಕದ ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಲೋಗೊದ ರೋಲಿಂಗ್ ಪಾಂಟ್ ಅನ್ನು ವಿನ್ಯಾಸಕರಾದ ಋಷಿ ಪಟೇಲ್ ಮತ್ತು ವೆಂಕಟೇಶ್ವರ ರಾವ್ ರೂಪಿಸಿದ್ದಾರೆ. ಲೋಗೊದ ಮೊದಲ ಎರಡು ಅಕ್ಷರಗಳಾದ B, E ಮತ್ತು ಕೊನೆಯ U ಕೆಂಪು ಬಣ್ಣದಲ್ಲಿದ್ದು , Be U ಎದ್ದು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಏಳು ಮತ್ತು ಎಂಟನೇ ಅಕ್ಷರಗಳಾದ U ಮತ್ತು R ಕನ್ನಡದ ಊ ಅನ್ನು ಹೋಲುತ್ತಿದೆ.
ವಿಧಾನಸೌಧದ ಎದುರು ನಡೆದ ನಮ್ಮೂರ ಹಬ್ಬದಲ್ಲಿ ಈ ಲೋಗೊವನ್ನು ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆಗೊಳಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್, ಬೆಂಗಳೂರು ಮೇಯರ್ ಆರ್. ಸಂಪತ್‌ರಾಜ್ ಹಾಜರಿದ್ದರು.
Comments are closed.