ಕ್ರೀಡೆ

ರೋಹಿತ್ ಶರ್ಮಾ ಗೆ ಪೊಲೀಸರು ಖಡಕ್ ವಾರ್ನ್ ಮಾಡಿದ್ದು ಯಾಕೆ ಗೊತ್ತಾ…?

Pinterest LinkedIn Tumblr


ನವದೆಹಲಿ: ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರು ಚಿಕ್ಕವಯಸ್ಸಿನಲ್ಲಿ ಜೈಲಿಗೆ ಹೋಗುವುದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡೆ ಎಂದು ಕಪೂರ್ ಜೊತೆ ತಮ್ಮ ಬಾಲ್ಯದ ಘಟನೆಯನ್ನು ಹಂಚಿಕೊಂಡರು.

ಪಂದ್ಯ ನಡೆಯುವ ಕೆಲ ಗಂಟೆಗಳ ಹಿಂದೆ ಅವರು ಈ ಬಗ್ಗೆ ಕಪೂರ್ ಅವರ ಜೊತೆ ಪ್ರಸ್ತಾಪಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಆಟವನ್ನು ತುಂಬಾ ಆಡುತ್ತಿದ್ದು, ಮನೆಯವರಿಗೂ ಕೂಡ ಅವರ ಆಟ ಇಷ್ಟವಾಗುತ್ತಿತು. ಇವರು ಆಟ ಆಡುವ ಸಂದರ್ಭದಲ್ಲಿ ಎದುರು ಮನೆಯ ಗಾಜಿಗೆ ಹೊಡೆಯುತ್ತಿದ್ದು, ಇದರಿಂದ ಎದುರು ಮನೆಯವರು ಪೊಲೀಸರಿಗೆ ಇವರ ವಿರುದ್ಧ ದೂರು ನೀಡಿದ್ದರು.

ಆಗ ಪೊಲೀಸ್ ಇವರ ಬಳಿ ಬಂದು ಮತ್ತೆ ಗಾಜು ಒಡೆದರೆ ಜೈಲಿಗೆ ಹಾಕುವುದಾಗಿ ಖಡಕ್ ವಾರ್ನ್ ಮಾಡಿದ್ದರು ಎಂದು ಅವರು ಕಪೂರ್ ಜತೆ ಮಾತನಾಡಿದ್ದರು.

Comments are closed.