ಡಿಸೆಂಬರ್ ತಿಂಗಳಿನಲ್ಲಿ ಅತೀ ಹೆಚ್ಚು ಸುದ್ದಿಗಳು ಹರಿದಾಡಿರುವುದು ಅನುಷ್ಕಾ-ವಿರಾಟ್ ಸುತ್ತಲೇ.
ಮದುವೆಯಾಗುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಸದ್ದಿಲ್ಲದೆಯೇ ಇಟಲಿಯಲ್ಲಿ ಸಪ್ತಪದಿ ತುಳಿದರು ವಿರಾಟ್-ಅನುಷ್ಕಾ. ಆ ನಂತರ ಅನುಷ್ಕಾ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ ಹನಿಮೂನ್ ಫೋಟೊ ಅಂತೂ ಟ್ರೋಲ್ ಆಗಿದ್ದಕ್ಕೇ ಲೆಕ್ಕವೇ ಇಲ್ಲ. ನಂತರ ಅವರ ಮದುವೆ ರಿಸೆಪ್ಷನ್ ಸುದ್ದಿಗಳು.
ಇದೀಗ ಹರಿದಾಡುತ್ತಿರುವ ಸುದ್ದಿಯೆಂದರೆ ಈ ದಂಪತಿ ಜತೆ ಇವರಿಬ್ಬರ ಮೆಚ್ಚಿನ ಸದಸ್ಯರಿಬ್ಬರು ವಾಸಲಿದ್ದಾರೆ. 34 ಕೋಟಿ ಬೆಲೆಬಾಳುವ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಬಾಳಲಿರುವ ಈ ಜೋಡಿ ತಮ್ಮ ಜತೆ ಇರಲು ತಮ್ಮ ನೆಚ್ಚಿನ ಬ್ರುನೊ, ಡ್ಯೂಡೆಯನ್ನೂ ಜತೆಗೆ ಕರೆ ತರಲಿದ್ದಾರೆ.
Comments are closed.