ಬೆಂಗಳೂರು: ಒಎಲ್ಎಕ್ಸ್’ನಲ್ಲಿ ಕಾರನ್ನು ಮಾರಟಕ್ಕಿಟ್ಟ ಟೆಕ್ಕಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಗರ ಹೊರವಲಯದ ಆನೇಕಲ್’ನಲ್ಲಿ ನಡೆದಿದೆ.
ಕುಮಾರ್ ಅಜಿತಾಭ್ (30) ನಾಪತ್ತೆಯಾಗಿರುವ ಟೆಕ್ಕಿಯಾಗಿದ್ದಾರೆ. ಬಿಹಾರ ಮೂಲದವರಾಗಿರುವ ಅಜಿತಾಭ್ ಅವರು ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂನಲ್ಲಿ ಕಳೆದ 5 ವರ್ಷಗಳಿಂಕ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ತಮ್ಮ ಸಿಯಾಜ್ ಕಾರನ್ನು ಮಾರಟ ಮಾಡುವುದಾಗಿ ಒಎಲ್ಎಕ್ಸ್ ನಲ್ಲಿ ಪ್ರಕಟಿಸಿದ್ದರು.
ಕಾರನ್ನು ಮಾರಾಟ ಮಾಡುವುದಾಗಿ ಪ್ರಕಟಿಸಿದ ಬಳಿಕ ಅಜಿತಾಭ್ ಕರೆ ಬಂದಾಗಲೆಲ್ಲಾ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಡಿ.18 ರಂದೂ ಕೂಡ ಅಜಿತಾಭ್ ಅವರ ಮೊಬೈಲ್’ಗೆ ಕರೆ ಬಂದಿದೆ ಎಂದಿನಂತೆಯೇ ಕಾರಿನಲ್ಲಿ ಹೊರ ಹೋದ ಬಳಿಕ ಮತ್ತೆ ವಾಪಸ್ಸಾಗಿಲ್ಲ.
ಒಎಲ್ಎಕ್ಸ್ ನಲ್ಲಿ ಜಾಹೀರಾತು ನೋಡಿದ ಬಳಿಕ ಅಜಿತಾಭ್ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆಂದು ಕುಟುಂಬ ಸದಸ್ಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ಅಜಿತಾಭ್ ನಾಪತ್ತೆ ಕುರಿತು ವೈಟ್ ಫೀಲ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಜಿತಾಭ್ ಪತ್ತೆಗೆ ನಗರ ಪೊಲೀಸರು ತನಿಖಾ ತಂಡವೊಂದನ್ನು ರಚನೆ ಮಾಡಿದ್ದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಅಜಿತಾಭ್ ಕುಮಾರ್ ಪತ್ತೆ ಮಾಡಲು ಈಗಾಗಲೇ ನಾವು ನಾಲ್ಕು ತಂಡವನ್ನು ರಚನೆ ಮಾಡಿದ್ದೇವೆ. ಡಿ.18 ರಂದು ಅಜಿತಾಭ್ ಕಾರನ್ನು ಮಾರಾಟ ಮಾಡುವ ಸಲುವಾಗಿ ಹೋರಹೋಗಿದ್ದಾರೆ. ಬಳಿಕ ಮನೆಗೆ ವಾಪಸ್ಸಾಗಿಲ್ಲ. ಅಜಿತಾಭ್ ಮೊಬೈಲ್ ಫೋನ್ ಸ್ಟಿಟ್ಚ್ ಆಫ್ ಬರುತ್ತಿದೆ ಎಂದು ಇನ್ಸ್’ಪೆಕ್ಟರ್ ಪ್ರವೀಣ್ ಬಾಬು ಅವರು ಹೇಳಿದ್ದಾರೆ.
Comments are closed.