ಮುಂಬೈ: ಹಾಲಿವುಡ್ ನಟ ಹಗ್ ಜಾಕ್ ಮನ್ ಅವರು ಬಾಲಿವುಡ್ ನ ಬಾದ್ ಶಾ ಅನಿಸಿಕೊಂಡ ಶಾರುಖ್ ಖಾನ್ ಅವರ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್, ಗಳನ್ನು ಕಾಪಿಮಾಡುತ್ತಿರುವುದಾಗಿ ಹೇಳಿದ್ದಾರೆ.
ಅವರು ದಿ ಗ್ರೇಟೆಸ್ಟ್ ಶೋಮ್ಯಾನ್ ಸಿನಿಮಾದ ಶೂಟಿಂಗ್ ಮಾಡುವಾಗ ಈ ಸಿನಿಮಾದಲ್ಲಿ ತಾನು ಅವರ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್ ವೊಂದನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಶಾರುಖ್ ಖಾನ್ ಅವರನ್ನು ನಟ ಹಗ್ ಜಾಕ್ ಮನ್ ಅವರು ತನ್ನ ಮೆಂಟರ್, ಅವರಿಂದ ತಾನು ಸಾಕಷ್ಟು ಕಲಿಯಬೇಕಿದೆ ಎನ್ನುವುದಾಗಿ ಕೂಡ ಹೇಳಿದ್ದಾರೆ.
ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಒಬ್ಬ ಖ್ಯಾತ ನಟರಾಗಿದ್ದು, ಅವರ ತಮ್ಮ ನಟನೆಯಿಂದ ಅಭಿಮಾನಿಗಳ ಮನಸ್ಸನ್ನು ಮಾತ್ರವಲ್ಲ, ನಟರ ಮನಸ್ಸನ್ನು ಗೆದ್ದಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ.
Comments are closed.