ಆರೋಗ್ಯ

ನಿಮಗೆ ಚೆನ್ನಾಗಿ ನಿದ್ರೆ ಬರಬೇಕಾದರೆ ಇಲ್ಲಿದೆ ಟಿಪ್ಸ್…

Pinterest LinkedIn Tumblr

ಬೆಂಗಳೂರು: ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿಲ್ಲವೇ? ನಿದ್ರೆಯಿಲ್ಲದೇ ಹೊರಳಾಡುತ್ತಿದ್ದೀರಾ? ಇದರಿಂದಾಗಿ ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿರಬಹುದು. ಹಾಗಿದ್ದರೆ ಕೆಲವು ಸಿಂಪಲ್ ಟ್ರಿಕ್ಸ್ ಮಾಡಿ ನೋಡಿ.

ಪುಸ್ತಕ ಓದಿ: ರಾತ್ರಿ ನಿದ್ರೆ ಬರುತ್ತಿಲ್ಲವೆಂದಾದರೆ, ನಿಮಗೆ ಇಷ್ಟವಿಲ್ಲದ ಪುಸ್ತಕವೊಂದನ್ನು ತೆಗೆದುಕೊಂಡು ಓದಿ. ಓದುತ್ತಿದ್ದರೆ ತಾನಾಗಿಯೇ ನಿದ್ರೆ ಬರುತ್ತದೆ.

ಹಾಸಿಗೆ ಬದಲಾಯಿಸಿ: ನಿದ್ರಾಹೀನತೆಗೆ ಹಾಸಿಗೆ, ತಲೆದಿಂಬು ಕೂಡಾ ಕಾರಣವಾಗಿರಬಹುದು. ಹಾಗಾಗಿ ಸರಿಯಾಗಿ ನಿದ್ರೆ ಬರಬೇಕೆಂದರೆ ಹಾಸಿಗೆ ಬದಲಾಯಿಸಿ ನೋಡಿ.

ಚೆರ್ರಿ ಜ್ಯೂಸ್: ನಿದ್ರೆ ಬರಲು ಕಷ್ಟವಾಗುತ್ತಿದೆ ಎಂದರೆ ಒಣ ಚೆರಿ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಒಂದೊಂದು ಸಿಪ್ ಕುಡಿಯುತ್ತಿರಿ. ತಾನಾಗಿಯೇ ನಿದ್ರೆ ಆವರಿಸುತ್ತದೆ.

ನಿಂಬೆ ಹಣ್ಣು ಇಡಿ: ನಿಮ್ಮ ಬೆಡ್ ಪಕ್ಕ ನಿಂಬೆ ಹಣ್ಣು ಇಟ್ಟುಕೊಳ್ಳಿ. ಒಂದು ವೇಳೆ, ಅಲರ್ಜಿ, ಶೀತದ ಸಮಸ್ಯೆಯಿಂದಾಗಿ ನಿದ್ರೆ ಬರಲು ಕಷ್ಟವಾದರೆ, ಇದು ಉಪಯೋಗಕ್ಕೆ ಬರಬಹುದು.

Comments are closed.