ಕರಾವಳಿ

ರೌಡಿ ಮೆಲ್ರಿಕ್ ಡಿಸೋಜ ಹತ್ಯಾ ಆರೋಪಿಗಳ ಬಂಧನ : ಹಳೆ ದ್ವೇಷಕ್ಕೆ ಪ್ರತಿಕಾರ..!

Pinterest LinkedIn Tumblr

ಮಂಗಳೂರು, ಡಿಸೆಂಬರ್.28: ಮಂಕಿಸ್ಟ್ಯಾಂಡ್ ವಿಜಯ್ ಸಹಚಾರ ಕುಖ್ಯಾತ ರೌಡಿ ಮೆಲ್ರಿಕ್ ಅಂತೋನಿ ಡಿಸೋಜ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗೋರಿಗುಡ್ಡ ವೆಲೆನ್ಸಿಯಾದ ನಿಶಾಕ್ ಪೂಜಾರಿ ಯಾನೆ ನಿಶಾಕ್ (28), ಗೋರಿಗುಡ್ಡ ನೆಹರೂ ರಸ್ತೆಯ ವಿನೇಶ್ ಕುಮಾರ್ (30), ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (33), ಮುಳಿಹಿತ್ಲು ಟೈಲರ್ ರೋಡ್ನ ಸಚಿನ್ ಶೆಟ್ಟಿ ಯಾನೆ ಸಚಿನ್ (22),ಕಂಕನಾಡಿಯ ಗೋರಿಗುಡ್ಡೆ ನೆಕ್ಕರೆಮಾರ್ನ ಪ್ರವೀಣ್ ಪೂಜಾರಿ (42) ಹಾಗೂ ಜಪ್ಪಿನಮೊಗರು ತಂದೊಳಿಗೆಯ ಗಣೇಶ್ ಕುಲಾಲ್ ಯಾನೆ ಗಣೇಶ್ ಯಾನೆ ಗಂಟೆ (34) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರ ಮತ್ತು ಮೊಬೈಲ್ ಸಹಿತ 2 ಬೈಕ್ ವಶಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ.

ನಗರದ ಗೋರಿಗುಡ್ಡ 4ನೆ ಅಡ್ಡ ರಸ್ತೆಯ ನಿವಾಸಿ ಕುಖ್ಯಾತ ರೌಡಿ ಮೆಲ್ರಿಕ್ ಅಂತೋನಿ ಡಿಸೋಜ (21) ನನ್ನು ಡಿಸೆಂಬರ್ 25ರಂದು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕಡಿದು ಕೊಲೆ ಮಾಡಿದ್ದರು.

2016ರಲ್ಲಿ ಮಾರ್ನಮಿಕಟ್ಟೆಯ ಸಂದೀಪ್ ಶೆಟ್ಟಿಯನ್ನು ಮೆಲ್ರಿಕ್ ಡಿಸೋಜ ಮತ್ತಾತನ ಸಹಚರರು ಕೊಲೆಗೆ ಯತ್ನಿಸಿದ್ದರು. ಈ ಮಧ್ಯೆ ಆರೋಪಿ ನಿಶಾಕ್ ಪೂಜಾರಿ ಮತ್ತು ಮೆಲ್ರಿಕ್ ಅಂತೊನಿ ಡಿಸೋಜನಿಗೆ ಹಳೆಯ ದ್ವೇಷವಿತ್ತು ಎನ್ನಲಾಗಿದೆ. ಕೊಲೆಯತ್ನಕ್ಕೆ ಪ್ರತೀಕಾರ ವಾಗಿ ಸಂದೀಪ್ ಶೆಟ್ಟಿಯು ಮೆಲ್ರಿಕ್ನನ್ನು ಕೊಲೆಗೈಯಲು ಸೂಚಿಸಿದ್ದ. ಅದರಂತೆ ಡಿ.25ರಂದು ದುಷ್ಕರ್ಮಿಗಳು ಮೆಲ್ರಿಕ್ನನ್ನು ಕೊಲೆಗೈದಿ ದ್ದರು ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿಗಳ ಪೈಕಿ ಪ್ರವೀಣ್ನ ಮೇಲೆ ಜಪ್ಪಿನಮೊಗರುವಿನಲ್ಲಿ ದೇವದಾಸ್ ಎಂಬಾತನ ಕೊಲೆ, ಪಂಪ್ವೆಲ್ನಲ್ಲಿ ರಾಜಾ ಎಂಬಾತನ ಕೊಲೆಯತ್ನ ಹಾಗೂ ವಿನೇಶ್ ಕುಮಾರ್ ನ ಮೇಲೆ ಪಂಪ್‌ವೆಲ್ ನಲ್ಲಿ ರಾಜಾ ಎಂಬಾತನ ಕೊಲೆಯತ್ನ, ಸಂದೀಪ್ ಶೆಟ್ಟಿಯ ಮೇಲೆ 2 ಹಲ್ಲೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಆರೋಪಿಗಳ ಪೈಕಿ ಸಚಿನ್ ಎಂಬಾತ ಹೊಟೇಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ರಾಮರಾವ್  ಮಾರ್ಗದರ್ಶನದಂತೆ ಪಾಂಡೇಶ್ವರ ಠಾಣಾ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಕೆ. ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿದೆ.

Comments are closed.