ಕೇವಲ 5 ನಿಮಿಷಗಳ ಕಾಲ ಸರಳವಾದ ಹ್ಯಾಂಡ್ ಎಕ್ಸರ್ ಸೈಜ್ ಮಾಡುವುದರಿಂದ ದೇಹವನ್ನು ಚುರುಕಾಗಿರಿಸಿಕೊಳ್ಳಬಹುದು ಎಂಬುವುದನ್ನು ತಿಳಿದುಕೊಂಡು ದೇಹದ ಕೆಲವು ಭಾಗಗಳ ಮೇಲೆ ಸ್ವಲ್ಪ ಹೊತ್ತು ಒತ್ತಡ ಹಾಕುವುದರ ಮೂಲಕ ಹಲವು ಖಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಆಕ್ಯುಪ್ರೆಷರ್ ಹೇಳುತ್ತದೆ. ಹಲವರಿಗೆ ಇದರ ಬಗ್ಗೆ ತಿಳಿದೇ ಇರುತ್ತದೆ. ಆದರೆ ಈಗ ನಾವು ಹೇಳುವ ಪುರಾತನವಾದ ವಿಧಾನ ‘ಜಿನ್ ಷಿನ್ ಜ್ಯುತ್ಸು ‘ ಸಹ ಇದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಕೇವಲ ಕೈಬೆರಳುಗಳ ಮೇಲೆ ಒತ್ತಡ ಹೇರುವುದರಿಂದ ದೇಹವನ್ನು ಚುರುಕಾಗಿರಿಸಿಕೊಳ್ಳುವ ಅವಕಾಶ ಇರುವುದರ ಜೊತೆಗೆ ಶಕ್ತಿಯನ್ನೂ ಹೆಚ್ಚಿಸಿಕೊಂಡು, ಮಾನಸಿಕ ಸಂತೋಷವನ್ನು ಪಡೆಯಬಹುದು.
‘ಜಿನ್ ಷಿನ್ ಜ್ಯುತ್ಸು ‘ವಿಧಾನದ ಪ್ರಕಾರ ಪ್ರತೀ ಕೈಬೆರಳು, ದೇಹದಲ್ಲಿ ಯಾವುದೋ ಒಂದು ಅವಯವಕ್ಕೆ ವಿವಿಧ ನರಗಳಿಗೆ ಸಂಬಂಧ ಹೊಂದಿರುತ್ತದೆ. ಇದರಿಂದ ಸಂಬಂಧಪಟ್ಟ ಕೈ ಬೆರಳಿನ ಮೇಲೆ ಸ್ವಲ್ಪ ಸಮಯ ಒತ್ತಡ ಹೇರಿದರೆ ಅಥವಾ ಆ ಬೆರಳನ್ನು ಸ್ವಲ್ಪ ಸಮಯ ಒತ್ತಿ ಹಿಡಿದಿದ್ದರೂ ಮಾನಸಿಕ ನಿಯಂತ್ರಣ ಪಡೆಯಲು ಅವಕಾಶವಿರುತ್ತದೆ. ಮೊದಲು ಒಂದು ಬೆರಳಿನ ಮೇಲೆ ಒತ್ತಡ ಹೇರುವುದನ್ನು ಪ್ರಾರಂಭಿಸಿ ಅದರಿಂದ 2ನೇ ಬೆರಳಿನ ಮೇಲೆ ಒತ್ತಡವನ್ನು ಹೆಚ್ಚಿಸಬೇಕಾಗುತ್ತದೆ. ಈ ಕ್ರಮದಲ್ಲಿಯೇ ಒಂದು ಸಂದರ್ಭದಲ್ಲಿ 5 ಬೆರಳುಗಳ ಮೇಲೆ ಒತ್ತಡ ಹೇರುವುದನ್ನು ಪ್ರಾರಂಭಿಸುವುದರಿಂದ ಮನಸನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ.
ಅಲ್ಲದೆ ಒಂದೊಂದು ಬೆರಳನ್ನೂ 2-3 ಶ್ವಾಸ ಉಚ್ಛ್ವಾಸ, ನಿಶ್ವಾಸಗಳ ವರೆಗೆ ಹಿಡಿದಿಟ್ಟುಕೊಂಡು ಒತ್ತಡ ಹೇರಿದರೂ ತಕ್ಕ ಫಲಿತಾಂಶ ದೊರೆಯುತ್ತದೆ. ಪ್ರತಿನಿತ್ಯ ಇದನ್ನು ಅಭ್ಯಾಸ ಮಾಡಿದಲ್ಲಿ ಮಾನಸಿಕವಾಗಿ ಮಾತ್ರವಲ್ಲದೆ ಶಾರೀರಕವಾಗಿಯೂ ಆರೋಗ್ಯವಂತರಾಗಿರಬಹುದು. ರಾತ್ರಿ ವೇಳೆ ಮಲಗುವ ಮೊದಲು ‘ಜಿನ್ ಷಿನ್ ಜ್ಯುತ್ಸು ‘ವಿಧಾನವನ್ನು ಅನುಸರಿಸುವ ಅಭ್ಯಾಸ ಇಟ್ಟುಕೊಂಡಲ್ಲಿ ಒಳ್ಳೆಯ ಫಲಿತಾಂಶ ಸಿಗುವುದಲ್ಲದೆ ಒಳ್ಳೆಯ ನಿದ್ದೆಯೂ ಬರುತ್ತದೆ.
ಅಂಗೈನ ಮಧ್ಯಭಾಗದ ಕೆಳಗೆ ಒತ್ತಡ ಹೇರಿದರೆ ಶ್ವಾಸ ಕ್ರಿಯೆ ಹತೋಟಿಗೆ ಬರುತ್ತದೆ. ಎದೆಭಾಗ ಉತ್ತೇಜನಗೊಳ್ಳುತ್ತದೆ.
ಹಾಗೆಯೇ ಹೆಬ್ಬೆರಳಿನ ಮೇಲೆ ಒತ್ತಡ ಹೇರುವುದರಿಂದ:- ಹೊಟ್ಟೆ ನೋವು, ತಲೆನೋವು, ಆತಂಕ, ಡಿಪ್ರೆಷನ್, ಚರ್ಮ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದು.
ತೋರುಬೆರಳಿನ ಮೇಲೆ ಒತ್ತಡ ಹೇರುವುದರಿಂದ:- ಕಿಡ್ನಿ, ಮೂತ್ರಾಶಯ ಹಾಗೂ ಜೀರ್ಣಾಶಯ ಸಮಸ್ಯೆಗಳು, ಮಲಬದ್ದತೆ, ಕೀಲು ನೋವು, ಹಲ್ಲು,ದವಡೆಗಳ ಸಮಸ್ಯೆಗಳಿಂದ ದೂರವಾಗಿರಬಹುದು.
ಮಧ್ಯ ಬೆರಳಿನ ಮೇಲೆ ಒತ್ತಡ ಹೇರುವುದರಿಂದ:- ಗಾಲ್ ಬ್ಲಾಡರ್, ಲಿವರ್, ರಕ್ತ ಪ್ರಸರಣೆ, ನಿಶ್ಶಕ್ತಿ, ಲೈಂಗಿಕ ಸಾಮರ್ಥ್ಯ, ತಲೆನೋವು, ಋತು ಸಂಬಂಧ ಸಮಸ್ಯೆ, ದೃಷ್ಟಿ, ನೇತ್ರ ದೋಷ ದಂತಹವುಗಳನ್ನು ಗುಣಪಡಿಸಿಕೊಳ್ಳಬಹುದು.
ಉಂಗುರದ ಬೆರಳಿನ ಮೇಲೆ ಒತ್ತಡ ಹೇರುವುದರಿಂದ:- ಶ್ವಾಸಕೋಶಗಳು, ಜೀರ್ಣಪ್ರಕ್ರಿಯೆ, ಶ್ವಾಸ ಸಮಸ್ಯೆ (ಆಸ್ತಮಾ), ಚರ್ಮ ಸಮಸ್ಯೆ, ಕಿವಿಯಿಂದ ಶಬ್ದ ಬರುವುದು ಇಂತಹವುಗಳನ್ನು ಗುಣಪಡಿಸಿಕೊಳ್ಳಬಹುದು.
ಕಿರು ಬೆರಳಿನ ಮೇಲೆ ಒತ್ತಡ ಹೇರುವುದರಿಂದ:- ಹೃದಯ, ಕರುಳು, ಮೂಳೆ, ನರ, ರಕ್ತದೊತ್ತಡ, ಅಜೀರ್ಣ, ಗ್ಯಾಸ್, ಆತಂಕ, ಇಂತಹವುಗಳನ್ನು ಗುಣಪಡಿಸಿಕೊಳ್ಳಬಹುದು.
Comments are closed.