ರಾಷ್ಟ್ರೀಯ

ಗೌರಿ ಜನ್ಮದಿನಕ್ಕೆ ಊರವರಿಗೆಲ್ಲಾ ಸಿಹಿ

Pinterest LinkedIn Tumblr


ಸ್ನೇಹಿತರ, ಕುಟುಂಬಸ್ಥರ, ಮೆಚ್ಚಿನ ಸ್ಟಾರ್‌ಗಳ ಜನ್ಮದಿನಾಚರಣೆ ಮಾಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ಸಾಕು ಪ್ರಾಣಿಗಳ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸುವ ಟ್ರೆಂಡ್‌ ಬೆಳೆಯುತ್ತಿದೆ.

ಮಹಾರಾಷ್ಟ್ರದ ಕರ್ಜಾತ್‌ ರಾಯಗಢ ಜಿಲ್ಲೆಯ ಭಿಸೆಗಾಂವ್‌ನ ನಿವಾಸಿ ಮಯುರೇಶ್‌ ಚೌಧರಿ ಎಂಬಾತ ತಮ್ಮ ಮನೆಯ ಹಸು ಗೌರಿಯ ಜನ್ಮ ದಿನವನ್ನು ವಿಶೇಷವಾಗಿ ಅಚರಿಸಿಕೊಂಡು ಬರುತ್ತಿದ್ದಾರೆ. ಗೌರಿಯನ್ನು ತಮ್ಮ ಕುಟುಂಬದ ಸದಸ್ಯರಲ್ಲಿ ಒಂದು ಎಂದು ಪರಿಗಣಿಸಿರುವ ಮಯುರೇಶ್‌ ಕುಟುಂಬ ಪ್ರತಿ ವರ್ಷ ಜನ್ಮ ದಿನವನ್ನು ಆಚರಿಸುತ್ತಿದೆ.

ಈ ವರ್ಷ ಬಹಳ ವಿಶೇಷವಾಗಿ ಗೌರಿಯ ಜನ್ಮ ದಿನವನ್ನು ಆಚರಿಸಿದ ಮಯುರೇಶ್‌ ಕುಟುಂಬ ಗ್ರಾಮದ 300-350 ಮಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇದಕ್ಕಾಗಿ 4 ಕೆಜಿ ಕೇಕ್‌ ಮತ್ತು ಬಂಜೊ ಪಾರ್ಟಿ ಹಮ್ಮಿಕೊಂಡಿದ್ದರು.
ನಾನು ಬದುಕಿರುವ ವರೆಗೂ ಗೌರಿಯ ಜನ್ಮ ದಿನವನ್ನು ಆಚರಿಸುತ್ತೇನೆ ಎಂದು ಮಯುರೇಶ್‌ ಮಹಾರಾಷ್ಟ್ರ ಟೈಮ್ಸ್‌‌ಗೆ ತಿಳಿಸಿದರು.

Comments are closed.