ರಾಷ್ಟ್ರೀಯ

ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ

Pinterest LinkedIn Tumblr


ಹೊಸದಿಲ್ಲಿ: ವಿವಿಧ ಉಳಿತಾಯ ಯೋಜನೆಗಳಲ್ಲಿನ ಬಡ್ಡಿ ದರವನ್ನು ಕೇಂದ್ರ ಸರಕಾರ 0.2ರಷ್ಟು ಕಡಿಮೆ ಮಾಡಿದೆ.

ಪಿಪಿಎಫ್, ಕಿಸಾನ್ ವಿಕಾಸ್ ಪತ್ರ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಬಡ್ಡಿ ದರವನ್ನು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಡಿತಗೊಳಿಸಲಾಗಿದೆ.

ಈ ಉಳಿತಾಯ ಯೋಜನೆಗಳಲ್ಲಿ ಪಿಪಿಎಫ್‌ನ ವಾರ್ಷಿಕ ಶೇಕಡ 7.8ರಷ್ಟು ಬಡ್ಡಿ ದರವನ್ನು ಶೇಕಡ 7.6ಕ್ಕೆ ಇಳಿಸಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಕಿಸಾನ್ ವಿಕಾಸ್ ಪತ್ರಕ್ಕೆ ವಿಗದಿಯಾಗಿದ್ದ ಶೇಕಡ 7.5ರ ಬಡ್ಡಿ ದರವನ್ನು ಶೇಕಡ 7.3ಕ್ಕೆ ಕಡಿತಗೊಳಿಸಲಾಗಿದೆ ಹಾಗೂ ಸುಕನ್ಯಾ ಸಮೃದ್ಧಿ ಖಾತೆಯ ಯೋಜನೆಯನ್ನು ಶೇಕಡ 8.3ರಿಂದ ಶೇಕಡ 8.1ಕ್ಕೆ ಇಳಿಸಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

Comments are closed.