ಮನೋರಂಜನೆ

ಗುಟ್ಟಾಗಿ ಇಟಲಿಯಲ್ಲಿ ಮದುವೆಯಾದ್ರಂತೆ ಈ ನಟಿಮಣಿ

Pinterest LinkedIn Tumblr


ಮುಂಬೈ: ಶಿವರಾಜ್ ಕುಮಾರ್ ಅಭಿನಯದ ಪರಮೇಶ ಪಾನ್ ವಾಲಾ ಚಿತ್ರದಲ್ಲಿ ಅಭಿನಯಿಸಿದ ನಾಯಕಿ ಸುರ್ವೀನ್ ಚಾವ್ಲಾ ತಮ್ಮ ಗೆಳೆಯ ಅಕ್ಷಯ್ ತಕ್ಕರ್ ಜತೆ ಹಸೆಮಣೆ ಏರಿದ್ದಾರೆ. ತಮ್ಮ ಮದುವೆಯ ವಿಷಯದಲ್ಲಿ ಸಾಕಷ್ಟು ಸಿಕ್ರೆಟ್ ಕಾಯ್ದುಕೊಂಡ ಈ ನಟಿ ತಮ್ಮ ಪತಿಯೊಂದಿಗಿನ ರೋಮ್ಯಾಂಟಿಕ್ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2015ರಲ್ಲೇ ಸುರ್ವೀನ್ ಚಾವ್ಲಾ ಉದ್ಯಮಿ ಅಕ್ಷಯ್ ತಕ್ಕರ್ ಜತೆ ಇಟಲಿಯಲ್ಲಿ ಮದುವೆಯಾಗಿದ್ದರಂತೆ. ಇಟಲಿಯಲ್ಲಿ ನಡೆದ ಇವರ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಕೆಲವು ಆಪ್ತ ಸ್ನೇಹಿತರಷ್ಟೇ ಭಾಗಿಯಾಗಿದ್ದರಂತೆ.

2013ರಲ್ಲಿ ಉದ್ಯಮಿ ಅಕ್ಷಯ್ ಸುರ್ವೀನ್ ಗೆ ಸ್ನೇಹಿತರೊಬ್ಬರಿಂದ ಪರಿಚಿತರಾಗಿದ್ದರಂತೆ. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿ ಮೂಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ವಿಷಯವನ್ನು ಗುಟ್ಟಾಗಿ ಇಟ್ಟ ಸುರ್ವೀನ್ ಈಗ ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಅಕ್ಷಯ್ ಜತೆಗಿನ ಫೋಟೊ ಶೇರ್ ಮಾಡಿದ್ದಾರೆ.

Comments are closed.