ಅಮೆರಿಕಾ: ಅತೀ ಶ್ರೀಮಂತ ದೇಶವೆಂದು ಹೆಸರುವಾಸಿಯಾಗಿರುವ ಅಮೆರಿಕಾ ಒಂದು ಹೊಸ ಉಪಕರಣವನ್ನು ಕಂಡುಹಿಡಿದಿದೆ. ಅಮೆರಿಕಾದ ಕಂಪೆನಿ ತಯಾರಿಸಿದ ಈ ಉಪಕರಣದ ವೈಶಿಷ್ಟ್ಯವೆನೆಂದರೆ ಇದು ಗಾಯಗಳನ್ನು ಶೀಘ್ರವಾಗಿ ವಾಸಿಮಾಡುತ್ತದೆಯಂತೆ.
ಇನ್ಮುಂದೆ ಏನಾದರೂ ಪೆಟ್ಟಾದರೆ, ಗಾಯಗಳಾದರೆ ಅದು ವಾಸಿಯಾಗಲು ತುಂಬಾ ಸಮಯಬೇಕು, ಔಷಧ ಹಚ್ಚಬೇಕು, ಬ್ಯಾಂಡೇಜ್ ಹಾಕಬೇಕು ಎಂಬ ಟೆನ್ಷನ್ ಇಲ್ಲ. ಈ ಉಪಕರಣ ಬ್ಯಾಂಡೇಜ್ ಗಿಂತಲೂ 15% ರಷ್ಟು ವೇಗವಾಗಿ ಗಾಯಗಳನ್ನು ವಾಸಿ ಮಾಡುತ್ತದೆ ಎಂದು ಅಮೆರಿಕಾದ ಮೂಲಗಳಿಂದ ತಿಳಿದು ಬಂದಿದೆ. ಈ ಉಪಕರಣಕ್ಕೆ’ ಅಕೌಸ್ಟಿಕ್ ಶಾಕ್ ವೇವ್’ ಎಂದು ನಾಮಕರಣ ಮಾಡಲಾಗಿದೆ. ಇದಕ್ಕೆ ಎಫ್.ಡಿ.ಎ.ನಿಂದ ಅನುಮೋದನೆ ಕೂಡ ಸಿಕ್ಕಿದೆ.
ಮನುಷ್ಯರ ಮೇಲೆ ಇದನ್ನು ಪ್ರಯೋಗ ಮಾಡಿ ಯಶಸ್ವಿ ಕೂಡ ಆಗಿದೆ. ಡಯಾಬಿಟಿಸ್ ರೋಗಿಗಳ ಕಾಲುಗಳಲ್ಲಾಗುವ ಗಾಯಗಳನ್ನು ವಾಸಿ ಮಾಡಲು ಇದು ಸಹಾಯಕವಾಗಿದೆ. ಸನುವೇವ್ ಕಂಪೆನಿ ಇದರಲ್ಲಿ ಶಾಕ್ ವೇವ್ ತಂತ್ರಜ್ಞಾನ ಬಳಸಿದ್ದು, ಇದು ಮೂಳೆಗಳ, ಮಾಂಸಖಂಡಗಳ ಮರುಜೋಡಣೆಗೂ ಸಹ ಇದು ಸಹಕಾರಿಯಾಗಿದೆ.
Comments are closed.