ಆರೋಗ್ಯ

ಮೂತ್ರ ಬಂದರೆ ಕಟ್ಟಿ ಕೂರಬೇಡಿ… ಪರಿಣಾಮ ಏನಾಗುತ್ತದೆ ಗೊತ್ತಾ?

Pinterest LinkedIn Tumblr

ಬೆಂಗಳೂರು: ಕೆಲವೊಮ್ಮೆ ಅನಿವಾರ್ಯವಾಗಿ ಮೂತ್ರ ಬರುವಾಗ ಮೂತ್ರಿಸಲು ಸಾಧ್ಯವಾಗದೇ ನಮ್ಮನ್ನು ನಾವು ನಿಯಂತ್ರಿಸಿಕೊಂಡು ಕೂರಬೇಕಾಗುತ್ತದೆ. ಆದರೆ ಇದರಿಂದ ಆಗುವ ಪರಿಣಾಮವೇನು ಗೊತ್ತಾ?

ಮೂತ್ರ ಎನ್ನುವುದು ನಮ್ಮ ದೇಹದಲ್ಲಿ ಬೇಡದ ಕಲ್ಮಶಗಳು ದ್ರವರೂಪದಲ್ಲಿ ಹೊರ ಹಾಕುವುದಾಗಿದೆ. ಕಲ್ಮಶವನ್ನು ಹೆಚ್ಚು ಹೊತ್ತು ನಮ್ಮ ಮೂತ್ರಾಶಯದಲ್ಲಿ ತಡೆಹಿಡಿಯುವುದರಿಂದ ಸೋಂಕು ಉಂಟಾಗಬಹುದು.

ಇದರಿಂದಾಗಿ ಮೂತ್ರ ನಾಳದ ಸೋಂಕಿನಂತಹ ಸಮಸ್ಯೆ ಕಂಡುಬರಬಹುದು. ಹೆಚ್ಚೆಂದರೆ ಒಬ್ಬ ವ್ಯಕ್ತಿ ಮೂರರಿಂದ ಆರು ಗಂಟೆ ಮೂತ್ರಿಸದೇ ಇರಬಹುದು. ಅದೂ ಆ ವ್ಯಕ್ತಿಯ ದೇಹ ಲಕ್ಷಣಗಳಿಗೆ ಅನುಗುಣವಾಗಿ. ಹಾಗಾಗಿ ಅನಿವಾರ್ಯವಲ್ಲದ ಸಂದರ್ಭದಲ್ಲೂ ಮೂತ್ರಿಸದೇ ಇರಬೇಡಿ.

Comments are closed.